ಹುಬ್ಬಳ್ಳಿ: ಗಂಗಿವಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ ಪಟದಾರಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ಜು. 4ರಂದು ದೀಪಕ ಪಟದಾರಿ ಕೊಲೆಯಾಗಿತ್ತು. ಈ ಘಟನೆಯ ಹಿಂದೆ ಪೊಲೀಸರ ಕೈವಾಡ ಇದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿ, ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ಇದರ ಜತೆಗೆ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿದೆ.
ಐದು ವರ್ಷದ ಹಿಂದೆ ದೀಪಕ, ಮೇಟಿ ಕುಟುಂಬದ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇದಕ್ಕೆ ಹುಡುಗಿ ಮನೆಯವರ ಸಮ್ಮತಿ ಇರಲಿಲ್ಲ. ಇದೇ ವಿಚಾರವಾಗಿ ಆಕ್ರೋಶಗೊಂಡು ಆರೋಪಿಗಳು ದೀಪಕನನ್ನು ಹತ್ಯೆಗೈದಿದ್ದಾರೆ ಎಂದು ದೀಪಕನ ಸಹೋದರ ಸಂಜಯ ಪಟದಾರಿ ಆರೋಪಿಸಿದ್ದಾರೆ.
ಮೂರು ತಿಂಗಳು ಕಳೆದರೂ ಇದುವರೆಗೆ ಪ್ರಮುಖ ಆರೋಪಿಗಳನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿಲ್ಲ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿ ಆದೇಶಿಸಿದೆ ಎಂದು ಈಟಿವಿ ಭಾರತಕ್ಕೆ ಹು-ಧಾ ಪೊಲೀಸ್ ಕಮಿಷನರ್ ಲಾಬೂರಾಮ್ ತಿಳಿಸಿದರು.
ಇದನ್ನೂ ಓದಿ: ಗ್ರಾಪಂ ಸದಸ್ಯ ದೀಪಕ್ ಕೊಲೆ ಪ್ರಕರಣ.. ಪೊಲೀಸರ ಕೈವಾಡದ ಬಗ್ಗೆ ಕುಟುಂಬಸ್ಥರ ಸಂಶಯ