ಧಾರವಾಡ: ಪುಲ್ವಾಮಾ ದಾಳಿ ಸಂಭವಿಸಿ ಒಂದು ವರ್ಷವಾದ ಹಿನ್ನೆಲೆ ಎಲ್ಲೆಡೆ ವೀರ ಯೋಧರಿಗೆ ನಾಗರಿಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಧಾರವಾಡದ ಮನಗುಂಡಿ ಗ್ರಾಮದಲ್ಲಿ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮನಗುಂಡಿ ಗ್ರಾಮದ ಯುವಕರೆಲ್ಲರೂ ಸೇರಿಕೊಂಡು ಪುಲ್ವಾಮಾ ದಾಳಿಯಲ್ಲಿ ವೀರಮರಣ ಹೊಂದಿದ ಯೋಧರಿಗೆ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.
ಮಹರಾಷ್ಟ್ರದ ಗಡಚಿರೋಲಿಯಲ್ಲಿ ವೀರ ಮರಣ ಹೊಂದಿದ ಮನಗುಂಡಿ ಗ್ರಾಮದ ಮಂಜುನಾಥ ಜಕ್ಕಣವರ ಸ್ಮಾರಕ ಎದುರಿಗೆ ಗ್ರಾಮದ ಯುವಕರು ಮೇಣದ ದೀಪ ಹಚ್ಚಿ ಯೋಧರನ್ನು ಸ್ಮರಿಸಿದರು.