ETV Bharat / state

ಸಾಯಿನಗರ, ಎಂ ತಿಮ್ಮಸಾಗರ ರಸ್ತೆಗಳ ಅಗಲೀಕರಣಕ್ಕೆ ಭೂಸ್ವಾಧೀನ : ಸ್ಥಳೀಯರೊಂದಿಗೆ ಡಿಸಿ ಸಭೆ - Dharwad latest news

ಅವಳಿ ನಗರದ ಅಭಿವೃದ್ಧಿಗಾಗಿ ಈ ರಸ್ತೆಗಳ ವಿಸ್ತರಣೆ ಅಗತ್ಯವಾಗಿದೆ. ಸಿಆರ್‌ಎಫ್‌ ಅಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸುಮಾರು 160 ಕಟ್ಟಡಗಳನ್ನು ತೆರವುಗೊಳಿಸಲು ಸೂಕ್ತ ನ್ಯಾಯಯುತ ಪರಿಹಾರದೊಂದಿಗೆ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದು..

DC meeting
DC meeting
author img

By

Published : Aug 8, 2020, 11:58 AM IST

ಧಾರವಾಡ : ಹುಬ್ಬಳ್ಳಿ ನಗರದ ಉಣಕಲ್ ಕ್ರಾಸ್ ಸಾತಿನಗರ ರಸ್ತೆಯನ್ನು 18 ಮೀಟರ್ ಅಗಲೀಕರಣ ಹಾಗೂ ಎಂ.ತಿಮ್ಮಸಾಗರ ವ್ಯಾಪ್ತಿಯ ರಸ್ತೆಗಳ ಅಗಲೀಕರಣಕ್ಕಾಗಿ ಭೂಸ್ವಾಧೀನ ಕುರಿತು ಸ್ಥಳೀಯರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು.

ಕೃಷಿ ವಿಶ್ವ ವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಸಾಮಾಜಿಕ ಅಂತರ ಹಾಗೂ ಕೊರೊನಾ ನಿಯಂತ್ರಣದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಸಭೆ ನಡೆಸಿದರು.

ಈ ವೇಳೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಮಾತನಾಡಿ, ಅವಳಿ ನಗರದ ಅಭಿವೃದ್ಧಿಗಾಗಿ ಈ ರಸ್ತೆಗಳ ವಿಸ್ತರಣೆ ಅಗತ್ಯವಾಗಿದೆ. ಸಿಆರ್‌ಎಫ್‌ ಅಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸುಮಾರು 160 ಕಟ್ಟಡಗಳನ್ನು ತೆರವುಗೊಳಿಸಲು ಸೂಕ್ತ ನ್ಯಾಯಯುತ ಪರಿಹಾರದೊಂದಿಗೆ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ಜಿಲ್ಲಾಧಿಕಾರಿಗಳ ಮನವಿಗೆ ಸ್ಥಳೀಯ ನಾಗರಿಕರು ಸಕಾರಾತ್ಮಕವಾಗಿ ಸ್ಪಂದಿಸಿದರು. ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಮಹಮದ್ ಜುಬೇರ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಸೇರಿ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.