ETV Bharat / state

ಪಶ್ಚಿಮ ‌ಪದವೀಧರ ಕ್ಷೇತ್ರ ಚುನಾವಣೆ: ಮತ ಎಣಿಕೆ ಆರಂಭ

author img

By

Published : Nov 10, 2020, 9:03 AM IST

Updated : Nov 10, 2020, 9:17 AM IST

ಧಾರವಾಡ ಕೃಷಿ ‌ವಿಶ್ವವಿದ್ಯಾಲಯದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ‌ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರದ ಸುತ್ತ ಬಿಗಿ-ಭದ್ರತೆ ಒದಗಿಸಲಾಗಿದೆ.

darwad:  MLC counting started
ಪಶ್ಚಿಮ ‌ಪದವೀಧರ ಕ್ಷೇತ್ರ ಚುನಾವಣೆ: ಮತ ಎಣಿಕೆ ಆರಂಭ

ಧಾರವಾಡ: ನಾಲ್ಕು ಜಿಲ್ಲೆಗಳ ಪಶ್ಚಿಮ‌ ಪದವೀಧರ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಕಣದಲ್ಲಿದ್ದ ಅಭ್ಯರ್ಥಿಗಳ ಭವಿಷ್ಯವಿಂದು ಹೊರಬೀಳಲಿದೆ.

ಚುನಾವಣಾಧಿಕಾರಿ ಆದಿತ್ಯ ಆಮ್ಲಾನ್​‌ ಬಿಸ್ವಾಸ್ ಹಾಗೂ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್ ಅವರು ಸ್ಟ್ರಾಂಗ್ ರೂಮ್ ಓಪನ್ ಮಾಡಿದರು. ಬಳಿಕ ಚುನಾವಣಾ ಮತ ಎಣಿಕೆ ಕಾರ್ಯದ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಪ್ರತಿಜ್ಞಾವಿಧಿ ಬೋಧಿಸಿದರು.

ಮತ ಎಣಿಕೆ ಆರಂಭ

ಮತ ಎಣಿಕೆ ಕೇಂದ್ರಕ್ಕೆ 4 ಎಸಿಪಿ, 12 ಇನ್ಸ್​​​ಪೆಕ್ಟರ್​​​, 16 ಪಿಎಸ್‌ಐ, 31 ಎಎಸ್ಐ, 71 ಹೆಡ್ ಕಾನ್ಸ್​​​ಟೇಬಲ್, 121 ಕಾನ್ಸ್​​​ಟೇಬಲ್, 12 ಮಹಿಳಾ ಪೊಲೀಸರು ಸೇರಿದಂತೆ ಒಟ್ಟು 274 ಪೊಲೀಸ್‌ರಿಂದ ಬಂದೋಬಸ್ತ್ ಒದಗಿಸಲಾಗಿದೆ. ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ ಈ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆದಿತ್ತು.

Last Updated : Nov 10, 2020, 9:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.