ಧಾರವಾಡ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಕರ್ನಾಟಕ ವಿವಿ ಸ್ನಾತಕ ಕೋರ್ಸ್ ಪರೀಕ್ಷೆ ಮುಂದೂಡಿಕೆಯಾಗಿವೆ.
ಏಪ್ರಿಲ್ 12ರಂದು ನಡೆಯಲಿದ್ದ ಪರೀಕ್ಷೆಗಳನ್ನು ಬಸ್ ಸೌಕರ್ಯ ಇಲ್ಲದ ಹಿನ್ನೆಲೆ ಪರೀಕ್ಷೆ ಮುಂದೂಡಿಕೆ ಮಾಡಿ ಕವಿವಿ ಮೌಲ್ಯಮಾಪನ ಕುಲಸಚಿವ ರವೀಂದ್ರನಾಥ ಕದಂ ಪ್ರಕಟಣೆ ಹೊರಡಿಸಿದ್ದಾರೆ.
ಮುಂದಿನ ಪರೀಕ್ಷಾ ದಿನ ನಂತರ ತಿಳಿಸಲಾಗುವುದು. ಏ. 15ರಿಂದ ಮೊದಲಿನ ವೇಳಾಪಟ್ಟಿಯಲ್ಲಿ ತಿಳಿಸಿದ ಷರತ್ತುಗಳ ಅನ್ವಯ ಎಲ್ಲಾ ಪರೀಕ್ಷೆಗಳು ಜರುಗುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.