ETV Bharat / state

ಹಂಸಲೇಖ ಹೇಳಿಕೆ ಸ್ವಾಗತಾರ್ಹ: ದೂರು ನೀಡಿದವರ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ

ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳ ವಾಸ್ತವ್ಯದ ಕುರಿತು ಹೇಳಿಕೆ ನೀಡಿರುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ತಿಳಿಸಿದೆ.

Dalitha sangharsha samithi support hamsalekha
ಹಂಸಲೇಖ ಹೇಳಿಕೆ ಸ್ವಾಗತಿಸಿದ ದಲಿತ ಸಂಘರ್ಷ ಸಮಿತಿ
author img

By

Published : Nov 23, 2021, 6:48 PM IST

ಹುಬ್ಬಳ್ಳಿ: ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರ ದಲಿತಪರ ಹೇಳಿಕೆಯ ಬಗ್ಗೆ ಪೊಲೀಸ್ ದೂರು ದಾಖಲು ಮಾಡಿರುವುದನ್ನು ವಿರೋಧಿಸಿ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟಿಸಲಾಯಿತು.

ಹುಬ್ಬಳ್ಳಿಯ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ ಅವರು, ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳ ವಾಸ್ತವ್ಯದ ಕುರಿತು ಹೇಳಿಕೆ ನೀಡಿರುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ. ಅಲ್ಲದೇ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಇದೊಂದು ಮಾರ್ಗವಾಗಿದೆ ಎನ್ನುವಂತಹ ಅವರ ನಿಲುವು ದಲಿತರ ಪರವಾಗಿದೆ. ಈ ನಿಟ್ಟಿನಲ್ಲಿ ಅವರ ಹೇಳಿಕೆಯನ್ನು ವಿರೋಧಿಸಿ ಪೊಲೀಸ್ ದೂರು ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಕೂಡಲೇ ಇಂತಹ ದುಷ್ಟ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಮಂಗಳೂರು: ವರದಿಗಾರನ ಮೇಲೆ ಹಲ್ಲೆ ಪ್ರಕರಣದಲ್ಲಿ ವಕೀಲನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.