ETV Bharat / state

ಪರಿಸರ ಜಾಗೃತಿ: ಪ್ರತಿ ಭಾನುವಾರ ಕಾನನದ ನಡುವೆ ಈ ತಂಡದ ಸೈಕಲ್​ ಸವಾರಿ - ಧಾರವಾಡ ಜಿಲ್ಲಾ ಸುದ್ದಿ

ಧಾರವಾಡ ಗೆಳೆಯರ ಬಳಗ ಸದಸ್ಯರು ಪ್ರತಿ ಭಾನುವಾರ ಕಾನನದ ನಡುವೆ ಸೈಕಲ್​ ಸವಾರಿ ಮಾಡುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಮೂಲಕ ಮಾದರಿಯಾಗಿದ್ದಾರೆ.

Cyclists awareness about save nature
ಧಾರವಾಡ ಗೆಳೆಯರ ಬಳಗ ಸದಸ್ಯರು
author img

By

Published : Jun 30, 2020, 1:34 PM IST

Updated : Jun 30, 2020, 2:23 PM IST

ಅಳ್ನಾವರ (ಧಾರವಾಡ): ನಿಸರ್ಗಾನ್ವೇಷಣೆ, ಗಿಡ ಮರಗಳ ಸುಂದರ ನೋಟ, ಹೊಲ ಗದ್ದೆಗಳತ್ತ ಕುತೂಹಲದ ಸವಿನೋಟ, ಕೆರೆ, ಪಕ್ಷಿ ಸಂಕುಲಗಳ ಪರಿಚಯ. ಪರಿಸರದ ಸೊಬಗನ್ನು ಕಣ್ಣಾರೆ ಕಂಡು ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾ, ಕಾನನಗಳ ನಡುವೆ ಸೈಕಲ್​ ಸವಾರಿ ಮಾಡುತ್ತಿದ್ದರೆ ಅದರ ಮಜವೇ ಬೇರೆ. ಅದು ಆರೋಗ್ಯ ಕಾಪಾಡಿಕೊಳ್ಳುವ ಸೂತ್ರವೂ ಹೌದು.

ಇಲ್ಲೊಂದು ತಂಡ ಕಾರು ಮತ್ತು ಬೈಕ್​​​ಗಳ ಭರಾಟೆ ನಡುವೆ ಸೈಕಲ್ ಸವಾರಿಯಲ್ಲಿ ಹಲವು ವರ್ಷಗಳಿಂದ ತೊಡಗಿದೆ. ಕೊರೊನಾ ರಣಕೇಕೆ ಹಾಕುತ್ತಿದ್ದರೂ ಈ ತಂಡದ ಸದಸ್ಯರು ಮಾತ್ರ ಸವಾರಿಗೆ ಬ್ರೇಕ್​​ ಹಾಕಿಲ್ಲ. ತಂಡದ ಹೆಸರು ಧಾರವಾಡ ಗೆಳೆಯರ ಬಳಗ.

ಪ್ರತಿ ಭಾನುವಾರ ಬಂತೆಂದರೆ ಸಾಕು ಬಳಗದ ಸದಸ್ಯರು ಹೊಸ ಜಾಗವನ್ನು ಹುಡುಕುತ್ತಾ, ಹರಟೆ ಹೊಡೆಯುತ್ತಾ ಸಾಗುತ್ತಾರೆ. ದಾರೀಲಿ ಸಿಕ್ಕವರಿಗೆಲ್ಲಾ ಪರಿಸರ ಉಳಿಸುವ ಕುರಿತು ಜಾಗೃತಿ ಮೂಡಿಸುತ್ತಾರೆ. ಅವರ ಪ್ರೇರಣೆಯೊಂದಿಗೆ ಎಲ್ಲರೂ ಕಾರು, ಬೈಕ್​​​​ ಬಿಟ್ಟು ಸೈಕಲ್​ ಹತ್ತಿದರೆ ಪರಿಸರ ಮಾಲಿನ್ಯ ಆಗುವುದನ್ನು ತಡೆಯಬಹುದು.

ಮಲೆನಾಡಿನ ಸೆರಗಿನ ಪಟ್ಟಣ, ಅಳ್ನಾವರದ ಸುತ್ತಮುತ್ತಲಿನ ಸುಂದರ ತಾಣಗಳು ಸವಾರಿಗೆ ಅತಿ ಪ್ರಿಯ. ವಿಶೇಷವೆಂದರೆ ಈ ತಂಡದಲ್ಲಿ ಕಿರಿಯ ವಯಸ್ಸಿನವರು, ಮಹಿಳೆಯೆರು, ವೃದ್ಧರು ಇದ್ದಾರೆ ಎನ್ನುತ್ತಾರೆ ಸೈಕಲ್ ಸವಾರ ಜಯಪ್ಪ ಜಾಡಮಾಲಿ. ತಂಡದ ಕ್ರೀಯಾಶೀಲ ಕಾಯಕಕ್ಕೆ ಪೊಲೀಸ್ ಅಧಿಕಾರಿ ಮುರಗೇಶ ಚೆನ್ನನವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Jun 30, 2020, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.