ETV Bharat / state

ಹುಬ್ಬಳ್ಳಿ: ರೈತ ಮಹಿಳೆಯ ಖಾತೆಗೆ ಸೈಬರ್ ಕಳ್ಳರಿಂದ ಕನ್ನ; 64 ಸಾವಿರ ರೂ. ವಂಚನೆ - ಈಟಿವಿ ಭಾರತ ಕನ್ನಡ

Cyber crime: ಸೈಬರ್ ವಂಚಕರು ರೈತ ಮಹಿಳೆಯೊಬ್ಬರ ಖಾತೆಯಿಂದ ಹಂತ ಹಂತವಾಗಿ 64 ಸಾವಿರ ರೂಪಾಯಿಯನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

Etv Bharatcyber-thieves-stolen-money-from-farmer-woman-bank-account
ಹುಬ್ಬಳ್ಳಿ: ರೈತ ಮಹಿಳೆಯ ಖಾತೆಗೆ ಸೈಬರ್ ಕಳ್ಳರಿಂದ ಕನ್ನ - 64 ಸಾವಿರ ವಂಚನೆ
author img

By ETV Bharat Karnataka Team

Published : Nov 28, 2023, 3:47 PM IST

Updated : Nov 28, 2023, 5:14 PM IST

ರೈತ ಮಹಿಳೆಯ ಬ್ಯಾಂಕ್​ ಖಾತೆಗೆ ಕನ್ನ

ಹುಬ್ಬಳ್ಳಿ: ರೈತ ಮಹಿಳೆಯೊಬ್ಬರ ಖಾತೆಯಿಂದ ಹಂತ ಹಂತವಾಗಿ 64 ಸಾವಿರ ರೂಪಾಯಿಯನ್ನು ಸೈಬರ್ ವಂಚಕರು ಲಪಟಾಯಿಸಿರುವ ಘಟನೆ ಬೆಳೆಕಿಗೆ ಬಂದಿದೆ. ಕುಂದಗೋಳ ತಾಲೂಕು ಯರಿನಾರಾಯಣಪುರ ಗ್ರಾಮದ ಮಲ್ಲವ್ವ ಅಶೋಕ ಮುಲ್ಲಹಳ್ಳಿ ಎಂಬ ರೈತ ಮಹಿಳೆ ವಂಚನೆಗೊಳಗಾದವರು. ಇವರು ಯರಗುಪ್ಪಿಯ ಕೆವಿಜಿ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದಾರೆ. ಅರ್ಧ ಎಕರೆ ಜಮೀನು ಹೊಂದಿರುವ ಇವರು ಕೃಷಿ‌ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಖಾತೆಯಲ್ಲಿ ಗೃಹ‌ಲಕ್ಷ್ಮಿ ಸೇರಿದಂತೆ ವಿವಿಧ ಮೂಲದಿಂದ ಉಳಿತಾಯ ಮಾಡಿದ ಹಣವನ್ನು ಇಟ್ಟಿದ್ದರು.

ಇತ್ತೀಚಿಗೆ ಕುಂದಗೋಳ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಖಾಲಿ‌ ನಿವೇಶನ ಖರೀದಿ ಮಾಡಿದ್ದರು. ಆಗ ರಿಜಿಸ್ಟ್ರೇಷನ್ ಸಲುವಾಗಿ ಹೆಬ್ಬೆಟ್ಟು (ಥಂಬ್) ನೀಡಿದ್ದರು. ಅದನ್ನು ಬಿಟ್ಟರೆ ಇವರು ಇಲ್ಲಿಯವರೆಗೂ ಯಾರೊಂದಿಗೂ ಯಾವುದೇ ಬ್ಯಾಂಕ್ ಖಾತೆ ಸೇರಿದಂತೆ ಯಾವುದೇ ಮಾಹಿತಿಯನ್ನು ಫೋನ್ ಸೇರಿದಂತೆ ಮೌಖಿಕವಾಗಿಯೂ ಹಂಚಿಕೊಂಡಿಲ್ಲ. ಅಷ್ಟಿದ್ದರೂ ಇವರ ಖಾತೆಯಿಂದ ಅ‌.24 ರಿಂದ ನ.1 ರ ವರೆಗೆ ಹಂತ ಹಂತವಾಗಿ 64 ಸಾವಿರ ಹಣ ವರ್ಗಾವಣೆಯಾಗಿದೆ. ಮೂರು ಬಾರಿ 10 ಸಾವಿರ, ಮೂರು ಬಾರಿ 9 ಸಾವಿರ ಹಾಗೂ ಒಂದು ಬಾರಿ 7000 ರೂಪಾಯಿಯನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಲಾಗಿದೆ.

ಈ ಕುರಿತಂತೆ ವಂಚನೆಗೊಳಗಾದ ಮಹಿಳೆ ಬ್ಯಾಂಕ್ ನಲ್ಲಿ ವಿಚಾರಿಸಿದಾಗ, ಬ್ಯಾಂಕ್​ ಸಿಬ್ಬಂದಿ ನಮ್ಮಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ತಿಳಿಸಿ‌ದ್ದಾರೆ. ಇದರಿಂದ ದಿಕ್ಕು ತೋಚದಂತಾದ ಮಹಿಳೆ ಧಾರವಾಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.

ವಂಚನೆಗೊಳಗಾದ ಮಹಿಳೆ ಮಲ್ಲವ್ವ ಮಾತನಾಡಿ, "ಯರಗುಪ್ಪಿಯ ಕೆವಿಜಿ ಬ್ಯಾಂಕ್​ನಲ್ಲಿ ಹಣ ಇಟ್ಟಿದ್ದೆ. ಇದೇ ತಿಂಗಳ 6ನೇ ತಾರೀಖು ಬ್ಯಾಂಕಿಗೆ ಭೇಟಿ ನೀಡಿದಾಗ 64 ಸಾವಿರ ಹಣ ದೋಚಿರುವುದು ಗೊತ್ತಾಗಿದೆ. ಬ್ಯಾಂಕ್​ ಸಿಬ್ಬಂದಿ ನಮಗೂ ಇದಕ್ಕೂ ಸಂಬಂಧ ಇಲ್ಲ, ಪೊಲೀಸ್​ ಠಾಣೆಗೆ ದೂರು ನೀಡಿ ಅಂತಾ ಹೇಳಿದ್ದಾರೆ. ಈ ಸಂಬಂಧ ಧಾರವಾಡಕ್ಕೆ ಹೋಗಿ ದೂರು ಕೊಟ್ಟುಬಂದಿದ್ದೇವೆ. ಕಳೆದ ತಿಂಗಳು ತಹಶೀಲ್ದಾರ್​ ಕಚೇರಿಯಲ್ಲಿ ಹೆಬ್ಬೆಟ್ಟು ನೀಡಿದ್ದೆ, ನಂತರ ಈ ಘಟನೆ ನಡೆದಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.

ಮಹಿಳೆಯ ಸಂಕಷ್ಟಕ್ಕೆ ರೈತ ಸಂಘಟನೆಯು ಸ್ಪಂದಿಸಿದ್ದು, ಅವರ ಬೆನ್ನಿಗೆ ನಿಂತಿದೆ. ರೈತ ಮುಖಂಡ ಶಂಕರಗೌಡ ದೊಡ್ಡಮನಿ ಮಾತನಾಡಿ, " ಮಹಿಳೆಯ ಖಾತೆಯಿಂದ ಹಣವನ್ನು 7 ಬಾರಿ‌ ಹಂತವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಮಹಿಳೆಯ ಸಂಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಮಹಿಳೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಬ್ಬೆಟ್ಟು ‌ನೀಡಿದ್ದರು. ಅಲ್ಲಿಂದಲೇ ವಂಚನೆ ಮಾಡಲಾಗಿದೆ ಎಂಬ ಅನುಮಾನವಿದೆ. ಅಧಿಕಾರಿಗಳು ಇವರಿಗೆ ನ್ಯಾಯ ದೊರಕಿಸಿಕೊಡಬೇಕು" ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಇನ್​ಸ್ಪೆಕ್ಟರ್ ಬ್ಯಾಂಕ್‌​ ಖಾತೆಗೆ ಆನ್​ಲೈನ್ ವಂಚಕರ ಕನ್ನ: ₹8.25 ಲಕ್ಷ ವರ್ಗಾವಣೆ

Last Updated : Nov 28, 2023, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.