ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇನ್ನು 21 ದಿನ ಮನೆಯಲ್ಲೆ ಇರಲು ಪ್ರಧಾನಿ ಮೋದಿ ಅವರು ಸೂಚನೆ ನೀಡಿದ್ದು, ಇಂದು ಯಾರೊಬ್ಬರೂ ಮನೆಯಿಂದ ಆಚೆ ಬರದಂತೆ ಪೊಲೀಸ್ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಅವಶ್ಯ ಸೇವೆಯಲ್ಲಿರುವವರಿಗೆ ಗುರುತಿನ ಚೀಟಿ ಹಾಕಿಕೊಳ್ಳಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಸೂಚನೆ ನೀಡಿದ್ದಾರೆ. ಸುಖಾ ಸುಮ್ಮನೆ ಇಂದು ಹೊರಗಡೆ ಬಂದರೆ ಲಾಠಿ ರುಚಿ ತಪ್ಪಿದ್ದಲ್ಲ. ಈಗಾಗಲೆ ಅವಳಿ ನಗರ ಪ್ರವೇಶ ಪಡೆಯುವ ಕಡೆಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಕೆಎಸ್ ಆರ್ ಪಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಹುಬ್ಬಳ್ಳಿ ನಗರ ಪ್ರವೇಶ ಮಾಡುವ ಕಡೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಮಧ್ಯ ರಾತ್ರಿಯಿಂದಲೇ ಮನೆ ಬಿಟ್ಟು ಹೊರಗಡೆ ಬಂದವರನ್ನ ಪೊಲೀಸರು ಚದುರಿಸಿದರು. ಹೀಗಾಗಿ ಇಂದು ಬೆಳಗ್ಗೆ ಸಂಪೂರ್ಣವಾಗಿ ವಾಣಿಜ್ಯ ನಗರಿ ಬಿಕೋ ಎನ್ನುತ್ತಿತ್ತು.