ETV Bharat / state

ರಾಜ್ಯಕ್ಕೆ ಕೋವಿಶೀಲ್ಡ್​ ಆಗಮನ: ನಾಳೆ ಧಾರವಾಡಕ್ಕೆ ರವಾನೆ ಸಾಧ್ಯತೆ

ರಾಜ್ಯಕ್ಕೆ ಕೋವಿಶೀಲ್ಡ್​ ಲಸಿಕೆಯ ಆಗಮನವಾಗಿದ್ದು, ಜಿಲ್ಲಾ ಕೇಂದ್ರಗಳಿಗೆ ರವಾನಿಸಲು ಸಿದ್ಧತೆ ನಡೆದಿದೆ. ಇನ್ನು ನಾಳೆಯಿಂದ ಜಿಲ್ಲೆಗಳಿಗೆ ಹಸ್ತಾಂತರ ಕಾರ್ಯ ಆರಂಭವಾಗುವ ಸಾಧ್ಯತೆ ಇದ್ದು, ಧಾರವಾಡಕ್ಕೂ ನಾಳೆ ಲಸಿಕೆ ಆಗಮಿಸುವ ಸಾಧ್ಯತೆ ಇದೆ ಎಂದು ಡಿಹೆಚ್​​​ಒ ಮಾಹಿತಿ ನೀಡಿದ್ದಾರೆ.

Preparing for vaccine storage in Dharwad
ಕಸಿಕೆ ದಾಸ್ತಾನಿಗೆ ಧಾರವಾಡದಲ್ಲಿ ಸಿದ್ಧತೆ
author img

By

Published : Jan 12, 2021, 5:22 PM IST

ಧಾರವಾಡ: ಕೊರೊನಾ ನಿಯಂತ್ರಣಕ್ಕಾಗಿ ಲಸಿಕಾ ವಿತರಣೆಗೆ ಸಿದ್ಧತೆ ನಡೆಯುತ್ತಿದ್ದು, ಈಗಾಗಲೇ ರಾಜ್ಯಕ್ಕೆ ಕೋವಿಶೀಲ್ಡ್​​ ಹಸ್ತಾಂತರವಾಗಿದೆ. ಬಳಿಕ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ರವಾನೆಯಾಗಲಿದ್ದು, ಧಾರವಾಡಕ್ಕೆ ನಾಳೆ ರವಾನೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದೀನಕರ ಮಾಹಿತಿ ನೀಡಿದ್ದಾರೆ.

ಧಾರವಾಡದ ಜಿಲ್ಲಾ ಆರೋಗ್ಯ ಇಲಾಖೆ ಲಸಿಕೆ ಸಂಗ್ರಹ ಕೊಠಡಿಯಲ್ಲಿ ಕೋಲ್ಡ್ ಸ್ಟೋರೆಜ್ ವ್ಯವಸ್ಥೆ ಮಾಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಖಾಸಗಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದಿದ್ದಾರೆ.

ಧಾರವಾಡ ಜಿಲ್ಲಾ ಕೇಂದ್ರಕ್ಕೆ ನಾಳೆ ಕೋವಿಶೀಲ್ಡ್​ ಲಸಿಕೆ ರವಾನೆ ಸಾಧ್ಯತೆ

ಈಗಾಗಲೇ 24 ಸಾವಿರ ಸಿಬ್ಬಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಜ. 16ರಿಂದ ಲಸಿಕೆ ನೀಡಲು ಆರಂಭ ಮಾಡಲಾಗುವುದು. ನಾಳೆ ಧಾರವಾಡಕ್ಕೆ ಲಸಿಕೆ ಬರುವ ಸಾಧ್ಯತೆಯಿದೆ. ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಲಸಿಕೆ ವಿತರಣೆಗೆ ಯಾವುದೇ ರೀತಿ ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆ, 32 ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕಾಸ್ಪತ್ರೆಗಳಲ್ಲಿ ಲಸಿಕೆ ಸಂಗ್ರಹಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಇಂದು ರಾಜ್ಯಕ್ಕೆ ಕೋವಿಶೀಲ್ಡ್ ಆಗಮನ : ವಿಶೇಷವಾಗಿ ಲಸಿಕೆ ಸ್ವಾಗತಿಸಿದ ಕಲಾವಿದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.