ETV Bharat / state

ಧಾರವಾಡ ಜಿಲ್ಲಾಡಳಿತದ ಮತ್ತೊಂದು ಸಾಧನೆ: 14 ದಿನದಲ್ಲಿ ಸಿದ್ದವಾಯ್ತು 66 ಹಾಸಿಗೆಗಳ ಕೋವಿಡ್​ ಆಸ್ಪತ್ರೆ! - dharwad corona news

ರಾಜ್ಯದಲ್ಲಿಯೇ ಕೊವಿಡ್ ನಿಯಂತ್ರಣದಲ್ಲಿ ಮುಂದಿರುವ ಧಾರವಾಡ ಜಿಲ್ಲಾಡಳಿತ ಹಾಗೂ ಕಿಮ್ಸ್ ಆಸ್ಪತ್ರೆ ಮತ್ತೊಂದು ಸಾಧನೆ ಮಾಡಿದೆ. ಮೇಕ್ ಶಿಫ್ಟ್ ಮಾದರಿಯಲ್ಲಿ ಕೇವಲ 14 ದಿನಗಳಲ್ಲಿ ಕೊರೊನಾ ಆಸ್ಪತ್ರೆ ನಿರ್ಮಾಣ ಮಾಡಿದೆ‌.

 Covid hospital ready in in 14 days with 66 beds in hubli

author img

By

Published : May 14, 2021, 7:10 PM IST

Updated : May 14, 2021, 9:39 PM IST

ಹುಬ್ಬಳ್ಳಿ: ಧಾರವಾಡ ಜಿಲ್ಲಾಡಳಿತ ಕೊರೊನಾ ಕಟ್ಟಿ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಬೆಂಗಳೂರಿನಲ್ಲಿಯೂ ಮಾಡಲಾಗದ ಸಾಧನೆಯನ್ನು ಹುಬ್ಬಳ್ಳಿಯಲ್ಲಿ ಮಾಡಿ ಸೈ ಎನಿಸಿಕೊಳ್ಳುತ್ತಿದೆ.

ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ 14 ದಿನದಲ್ಲಿ 66 ಬೆಡ್ ಗಳ ಕೋವಿಡ್ ಆಸ್ಪತ್ರೆ ನಿರ್ಮಿಸುವ ಮೂಲಕ‌ ಹೊಸ ಇತಿಹಾಸ ಸೃಷ್ಟಿಸಿದೆ‌.

14 ದಿನದಲ್ಲಿ ಸಿದ್ದವಾಯ್ತು 66 ಹಾಸಿಗೆಗಳ ಕೋವಿಡ್​ ಆಸ್ಪತ್ರೆ

ರಾಜ್ಯದಲ್ಲಿಯೇ ಕೊವಿಡ್ ನಿಯಂತ್ರಣದಲ್ಲಿ ಮುಂದಿರುವ ಧಾರವಾಡ ಜಿಲ್ಲಾಡಳಿತ ಹಾಗೂ ಕಿಮ್ಸ್ ಆಸ್ಪತ್ರೆ ಮತ್ತೊಂದು ಸಾಧನೆ ಮಾಡಿದೆ. ಮೇಕ್ ಶಿಫ್ಟ್ ಮಾದರಿಯಲ್ಲಿ ಕೇವಲ 14 ದಿನಗಳಲ್ಲಿ ನಿರ್ಮಾಣ ಮಾಡಿದೆ‌. ನೂತನವಾಗಿ ನಿರ್ಮಿಸಲಾಗಿರುವ ಆಸ್ಪತ್ರೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್​ ಜೋಶಿ ಹಾಗೂ ಬೃಹತ್ ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇಂದು ಉದ್ಘಾಟಿಸಿದರು.

ವಿಶೇಷತೆ ಏನು?

ರಾಜ್ಯ ವಿಪತ್ತು ನಿರ್ವಹಣಾ ನಿಧಿಯ 66 ಲಕ್ಷ ವೆಚ್ಚದಲ್ಲಿ ಒಟ್ಟು 1,500 ಚದುರ ಮೀಟರ್ ವಿಸ್ತೀರ್ಣದ ಮೂರು ಕ್ಯಾಜುಯಾಲಿಟಿ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ವಿದ್ಯುತ್ ಸೇರಿದಂತೆ ಇತರ ಮೂಲ ಸೌಕರ್ಯಗಳ ಕಲ್ಪಿಸಲಾಗಿದೆ.

14 ದಿನದಲ್ಲಿ ಸಿದ್ದವಾಯ್ತು 66 ಹಾಸಿಗೆಗಳ  ಕೋವಿಡ್​ ಆಸ್ಪತ್ರೆ!

ಪ್ರತಿ ಕೇಂದ್ರ 22 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಕ್ಯಾಜ್ಯಯಾಲಿಟಿ ಕೇಂದ್ರ ಮಧ್ಯದಲ್ಲಿ ವೈದ್ಯರು ಹಾಗೂ ನರ್ಸ್‌ಗಳು ಕಾರ್ಯ ನಿರ್ವಹಿಸಲು ಪ್ರತ್ಯೇಕ ಸ್ಥಳಾವಕಾಶವಿದೆ. 250 ಚದುರ ಮೀಟರ್ ವಿಸ್ತೀರ್ಣದಲ್ಲಿ ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕವಾಗಿ 6 ಬಾತ್ ರೂಮ್ ಹಾಗೂ 6 ಶೌಚಾಲಯಗಳ್ಳು ನಿರ್ಮಿಸಲಾಗಿದೆ. ನೀರು, ಶಬ್ದ ನಿರೋಧಕವಾಗಿರುವ ಆಸ್ಪತ್ರೆ 20 ವರ್ಷಗಳ ಕಾಲ ಬಾಳಿಕೆ ಬರಲಿದೆ. ಅಗತ್ಯವಿದ್ದೆಡೆ ಆಸ್ಪತ್ರೆ ಸ್ಥಳಾಂತರಿಸಬಹುದಾಗಿದೆ. ಆಸ್ಪತ್ರೆಯನ್ನು ಕೋವಿಡ್ ರೋಗಿಗಳ ತಾತ್ಕಾಲಿಕ ಆರೈಕೆಗೆ ಬಳಕೆ ಮಾಡಬಹುದಾಗಿದೆ. ಜಿಲ್ಲಾಡಳಿತದಿಂದ ಆಕ್ಸಿಜನ್ ಸಿಲಿಂಡರ್ ಹಾಗೂ ಆಕ್ಸಿಜನ್ ಕಾನ್ಸಟ್ರೇಟರ್ಸ್‌ಗಳನ್ನು ನೀಡಲಾಗಿದೆ. ಕೋವಿಡ್ ಅಲೆ ತೀವ್ರತೆ ಇಳಿದ ಬಳಿಕ ಆಸ್ಪತ್ರೆಯನ್ನು ಲಿಸಿಕಾ ಕೇಂದ್ರ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸಲಾಗುತ್ತದೆ. ಇಕೋ ಇನ್ ಬಾಕ್ಸ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದು, ಇದರಿಂದ ಕೊವಿಡ್ ರೋಗಿಗಳು ಪ್ರಾಥಮಿಕ ಚಿಕಿತ್ಸೆ ಪಡೆಯಲು ಹೆಚ್ಚು ಅನುಕೂಲವಾಗಲಿದೆ.

ಈಗಾಗಲೇ ಕಿಮ್ಸ್ ನಲ್ಲಿ ಕೊವಿಡ್ ಗಾಗಿ ಒಂದು ಸಾವಿರ ಬೆಡ್ ಗಳನ್ನು ನಿಯೋಜನೆ ಮಾಡಲಾಗಿದೆ. ಆದ್ರೂ ಕೂಡ ಬೆಡ್​ಗಳ ಕೊರತೆ ತಲೆದೋರುತ್ತಿದೆ. ಈ ಆಸ್ಪತ್ರೆಯಲ್ಲಿ ಸುಮಾರು 66 ರೋಗಿಗಳು ಚಿಕಿತ್ಸೆ ಪಡೆಯುವುದರಿಂದ ಒಂದಷ್ಟು ಒತ್ತಡ ಕಡಿಮೆಯಾಗಲಿದೆ.

Last Updated : May 14, 2021, 9:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.