ETV Bharat / state

ಬಿಜೆಪಿ ಮೇಲೆ ಕಾಂಗ್ರೆಸ್​ ಮಾಡಿದ್ದ ಆರೋಪದ ಹತ್ತು ಪಟ್ಟು ಈಗ ಭ್ರಷ್ಟಾಚಾರ ಆಗ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ - ರಾಹುಲ್​ ಗಾಂಧಿ

ಶಿಕ್ಷೆಯನ್ನು ಸುಪ್ರೀಂ ಕೋರ್ಟ್​ ತಡೆದಿರುವುದು ಹೊರತು ರಾಹುಲ್​ ಗಾಂಧಿ ಮಾಡಿದ್ದು ಸರಿ ಎಂದು ಹೇಳಿಲ್ಲ ಎಂದು ಕೇಂದ್ರ ಸಚಿವ ಪಹ್ಲಾದ್​ ಜೋಶಿ ಹೇಳಿದ್ದಾರೆ.

Union Minister Pralhad Joshi
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
author img

By

Published : Aug 5, 2023, 5:30 PM IST

Updated : Aug 5, 2023, 5:51 PM IST

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ: ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಬಿಜೆಪಿ ಮೇಲೆ ಕಾಂಗ್ರೆಸ್ ಮಾಡಿದ್ದ ಆರೋಪದ ಹತ್ತು ಪಟ್ಟು ಭ್ರಷ್ಟಾಚಾರ ನಡೆಯುತ್ತಿದೆ. ವರ್ಗಾವಣೆಗಳನ್ನು ಹರಾಜು ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 10, 12 ಲಕ್ಷ ಕೊಟ್ಟವರಿಗೆ ವರ್ಗಾವಣೆ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಈ ರೀತಿಯ ಹರಾಜು ಪ್ರಕ್ರಿಯೆ ನಡೆದಿದೆ. ಅಧಿಕಾರಿಗಳು ನನಗೆ ವೈಯಕ್ತಿಕವಾಗಿ ಕರೆ ಮಾಡಿ ನೋವು ನೋಡಿಕೊಳ್ಳುತ್ತಿದ್ದಾರೆ ಎಂದರು.

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಶಿಕ್ಷೆಗೆ ತಡೆಯಾಜ್ಞೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿಯವರ ಶಿಕ್ಷೆಯನ್ನು ಕೋರ್ಟ್ ತಡೆದಿದೆ, ಹೊರತು ಅವರು ಮಾಡಿದ್ದು ಸರಿ ಅಂತ ಒಪ್ಪಿಕೊಂಡಿಲ್ಲ. ಮಾತನಾಡಿದ್ದು ತಪ್ಪು ಅಂತ ಹೇಳಿದೆ. ಕೋರ್ಟ್ ತೀರ್ಪು ಆಧರಿಸಿ ಸ್ಪೀಕರ್ ರಾಹುಲ್ ಗಾಂಧಿ ಸಂಸದ ಸ್ಥಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ರಾಹುಲ್ ಗಾಂಧಿ ಅವರ ಪ್ರಕರಣದಲ್ಲಿ ಯಾವುದೇ ರಾಜಕೀಯ ಇಲ್ಲ, ಅದು‌ ನ್ಯಾಯಾಲಯದ ವಿಚಾರ ಎಂದು ಹೇಳಿದರು.

ಗೃಹ ಜ್ಯೋತಿ ಅರ್ಜಿ ಸಲ್ಲಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದವು, ಈಗ ಅದೇ ಮುಂದುವರಿದೆ. ದಿನ ಬಳಕೆ ವಿದ್ಯುತ್ ದರ ಜಾಸ್ತಿ ಮಾಡಿ ಯೋಜನೆ ಜಾರಿ ಮಾಡಲಾಗಿದೆ. ರಾಜಸ್ಥಾನದಲ್ಲಿ ಹೀಗೆ ಫ್ರೀ ವಿದ್ಯುತ್ ಕೊಡುತ್ತೀವಿ ಅಂತ ಹೇಳಿ ವಿದ್ಯುತ್ ದರ ಏರಿಕೆ ಮಾಡಿದ್ದಾರೆ. ಅಲ್ಲದೆ ಯೋಜನೆ ಪಡೆಯಲು ಬಹಳಷ್ಟು ಷರತ್ತು ವಿಧಿಸಿದ್ದಾರೆ. ಜನ ಇದನ್ನು ಗಮನಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಉತ್ತರ ನೀಡುತ್ತಾರೆ ಎಂದರು.

ಆರಗ ಜ್ಞಾನೇಂದ್ರ ಅವರು ಖರ್ಗೆ ಮತ್ತು ಕಲ್ಯಾಣ ಕರ್ನಾಟಕದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಜೋಶಿ, ಅವರ ಹೇಳಿಕೆಗೆ ನಮ್ಮ ವಿರೋಧವಿದೆ. ಖರ್ಗೆಯವರ ಬಗ್ಗೆ ಜ್ಞಾನೇಂದ್ರ ಆ ರೀತಿ ಮಾತನಾಡಬಾರದಿತ್ತು. ರಾಜಕೀಯ ವಿಚಾರವಾಗಿ ಖರ್ಗೆ ಮತ್ತು ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಆದರೆ ವೈಯಕ್ತಿಕವಾಗಿ ಖರ್ಗೆ ಅನುಭವ, ಹಿರಿತನದ ಬಗ್ಗೆ ಗೌರವವಿದೆ. ಯಾವುದೇ ವ್ಯಕ್ತಿ ಮೈ ಬಣ್ಣ, ಪ್ರದೇಶ‌ ನೋಡಿ ಮಾತನಾಡುವುದು ಸರಿಯಲ್ಲ. ಈ ಕುರಿತು ನಾನು ಜ್ಞಾನೇಂದ್ರಗೆ ತಿಳಿ ಹೇಳುತ್ತೇನೆ ಎಂದರು.

ಉಡುಪಿ ಹಾಸ್ಟೆಲ್ ವಿಡಿಯೋ ಮತ್ತು ಹುಬ್ಬಳ್ಳಿ ಕಾಲೇಜು ಪೋಸ್ಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಸಮಾಜ ದ್ರೋಹಿಗಳಿಗೆ ಕಾಂಗ್ರೆಸ್ ಬಂದಿದ್ದು, ಕುಮ್ಮಕ್ಕು ಸಿಕ್ಕಂತಾಗಿದೆ. ನಾವು ಏನು ಮಾಡಿದರು ಕಾಂಗ್ರೆಸ್ ಪಾರ್ಟಿ ಸಂರಕ್ಷಣೆ ನೀಡುತ್ತೆ ಅಂತ ಇದನ್ನು ಮಾಡಲಾಗುತ್ತಿದೆ. ಹೀಗಾಗಿ ಇಂತಹ ಕೃತ್ಯ ನಡೆಯುತ್ತಿದೆ ಎಂದರು.

ಇದನ್ನೂ ಓದಿ: ನೈಸ್ ಹಗರಣದ ದಾಖಲೆಗಳನ್ನು ಪ್ರಧಾನಿ ಮೋದಿಗೆ ಕೊಡುತ್ತೇನೆ, ಪೆನ್ ಡ್ರೈವ್ ಬಿಡುಗಡೆ ಮಾಡಿದ್ರೆ ತನಿಖೆ ಮಾಡುವ ತಾಕತ್ತು ಸರ್ಕಾರಕ್ಕೆ ಇದೆಯಾ? ಕುಮಾರಸ್ವಾಮಿ ಸವಾಲು

Last Updated : Aug 5, 2023, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.