ಧಾರವಾಡ: ಜಿಲ್ಲೆಯಲ್ಲಿ ಒಂದೇ ದಿನ 49 ಜನರಲ್ಲಿ ಕೊರೊನಾ ಗುಣಲಕ್ಷಣ ಕಂಡುಬಂದಿದೆ. 24 ಗಂಟೆ ಅವಧಿಯಲ್ಲಿ 49 ಜನರಲ್ಲಿ ಕೊರೊನಾ ಲಕ್ಷಣ ಕಂಡು ಬಂದಿದೆ.
![ಧಾರವಾಡದಲ್ಲಿ 24 ಗಂಟೆ ಅವಧಿಯಲ್ಲಿ 49 ಜನರಲ್ಲಿ ಕೊರೊನಾ ಲಕ್ಷಣ](https://etvbharatimages.akamaized.net/etvbharat/prod-images/kn-dwd-4-health-bulletine-av-ka10001_10042020212455_1004f_1586534095_507.jpg)
ಶಂಕಿತರ ಕಫದ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಅದರಲ್ಲಿ 7 ಜನರನ್ನು ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇಡಲಾಗಿದೆ. ನಿನ್ನೆ ಹುಬ್ಬಳ್ಳಿ ವ್ಯಕ್ತಿಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆ ಮತ್ತೆ ಶಂಕಿತರ ಸಂಖ್ಯೆ ಹೆಚ್ಚಾಗಿದೆ.
ಇಲ್ಲಿಯವರೆಗೆ ಒಟ್ಟು 824 ಜನರ ಮೇಲೆ ನಿಗಾ ವಹಿಸಲಾಗಿದೆ. 170 ಜನರನ್ನು 14 ದಿನಗಳ ಹೋಮ್ ಐಸೋಲೇಷನ್ನಲ್ಲಿ ಇಡಲಾಗಿದೆ.