ಧಾರವಾಡ: ಕೊರೊನಾ ವೈರಸ್ ಭೀತಿಯಿಂದ ಲಾಕ್‌ಡೌನ್ ಆದ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿ, ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದವರಿಗೆ ಧಾರವಾಡದ ಯುವಕರು ಕಿರುಚಿತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ ಪೌರ ಕಾರ್ಮಿಕರು, ವೈದ್ಯಕೀಯ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಮಾಧ್ಯಮ ಮತ್ತು ಪತ್ರಿಕಾರಂಗದವರ ಅವಿರತ ಸೇವೆಗೆ ಕಿರುಚಿತ್ರ ಸಮರ್ಪಿಸಿದ್ದಾರೆ.
ಧಾರವಾಡದ ವಿಜೇತ ಕುಮಾರ ಹೊಸಮಠ, ಗಣೇಶ ಪಾಟೀಲ್ ಹಾಗೂ ಪ್ರಶಾಂತ ಬಡಿಗೇರ ಎಂಬ ಯುವಕರು ಲಾಕ್‌ಡೌನ್ ಸಮಯದಲ್ಲಿ ಸುಮಾರು 40 ದಿನಗಳ ಕಾಲ ವಿಡಿಯೋ ಚಿತ್ರೀಕರಣ ಸೆರೆ ಹಿಡಿದು ಕೃತಜ್ಞತೆ ಸಲ್ಲಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿರುವುದನ್ನು ಚಿತ್ರಿಸಿ, ರಾಜ್ಯದ ಖ್ಯಾತ ಚಿತ್ರ ಸಾಹಿತಿ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕ ವಿಜಯ್ ಪ್ರಕಾಶ್ ಅವರು ರಚಿಸಿದ ಸಾಹಿತ್ಯದ ಸುರುಳಿಯನ್ನು ಬಳಸಿಕೊಂಡು ಈ ವಿಡಿಯೋ ರಚಿಸಿದ್ದಾರೆ.
ಎಸಿಪಿ ಅನುಷಾ. ಜಿ ಅವರು ಈ ಕಿರುಚಿತ್ರವನ್ನು ಬಿಡುಗಡೆಗೊಳಿಸಿದ್ದು, ಈ ಕಿರುಚಿತ್ರ ಯೂಟ್ಯೂಬ್ ಹಾಗೂ ಫೇಸ್ಬುಕ್ಗಳಲ್ಲಿ 'ಧಾರವಾಡ ಕೊರೊನಾ ಸಾಂಗ್' ಹೆಸರಿನಲ್ಲಿ ಲಭ್ಯವಿದೆ.