ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ವೈದ್ಯೆಯೊಬ್ಬರು ತಮ್ಮ ಪುಟ್ಟ ಮಗುವನ್ನು ಮುಟ್ಟಿ ಮುದ್ದಾಡಲಾಗದೇ ದೂರದಲ್ಲಿ ನಿಂತುಕೊಂಡು ಮಾತನಾಡುವ ದೃಶ್ಯ ಮನಕಲಕುತ್ತಿದೆ.
ನಗರದ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಡಾ. ರುಕ್ಸಾನ ಯೌನುಸ್ ನಜ್ಮಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಒಂದು ವಾರ ಕ್ವಾರಂಟೈನ್ನಲ್ಲಿ ಇದ್ದರು. ಹೀಗಾಗಿ ಎರಡು ವಾರಗಳ ಕಾಲ ಕುಟುಂಬದವರಿಂದ ದೂರ ಉಳಿದು ಕೊರೊನಾ ಸೇನಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇನ್ನು ಕೋವಿಡ್ ತಪಾಸಣೆ ನೆಗೆಟಿವ್ ಬಂದ ನಂತರ ಅಧಿಕಾರಿಗಳಲ್ಲಿ ಅನುಮತಿ ಪಡೆದು ಮಕ್ಕಳ ಕೋರಿಕೆಯ ಮೇರೆಗೆ ಬಿಡುವು ಮಾಡಿಕೊಂಡು, ತಮ್ಮ ವಸತಿ ಗೃಹದ ಮುಂದೆ ದೂರದಲ್ಲಿ ನಿಂತು ಅಂತರವನ್ನು ಕಾಪಾಡಿಕೊಂಡು ತನ್ನ ಮಗಳೊಂದಿಗೆ ಮಾತನಾಡಿಸುತ್ತಿರುವ ದೃಶ್ಯ ಮನಕಲಕುವಂತಿದೆ.