ETV Bharat / state

ಧಾರವಾಡದ ಮೂವರಿಗೆ ಕೊರೊನಾ ಲಕ್ಷಣ.. ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿದ್ದ ಐವರ ಪತ್ತೆ.. - Corona symptoms got three in Dharwad

ಈವರೆಗೂ 44 ಜನರನ್ನ ಪರೀಕ್ಷೆಗೊಳಪಡಿಸಲಾಗಿದೆ. ಅವರೆಲ್ಲರದೂ ಕೊರೊನಾ ನೆಗೆಟಿವ್ ವರದಿ ಬಂದಿವೆ. ಒಬ್ಬರಲ್ಲಿ ಮಾತ್ರ ಪಾಸಿಟಿವ್ ವರದಿ ಬಂದಿದೆ. ಪಾಸಿಟಿವ್ ವ್ಯಕ್ತಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ
ಕೊರೊನಾ
author img

By

Published : Mar 31, 2020, 11:44 PM IST

ಧಾರವಾಡ : ಜಿಲ್ಲೆಯ ಮೂವರಲ್ಲಿ ಶಂಕಿತ ಕೊರೊನಾ ಲಕ್ಷಣಗಳು ಪತ್ತೆಯಾಗಿವೆ. ಆ ಮೂವರ ಕಫದ ಮಾದರಿಗಳನ್ನ ಶಿವಮೊಗ್ಗಕ್ಕೆ ರವಾನೆ‌ ಮಾಡಲಾಗಿದೆ. 6 ಜನರಿಗೆ ಆಸ್ಪತ್ರೆಯಲ್ಲಿ ಐಸೋಲೇಷನ್​ನಲ್ಲಿ‌ಡಲಾಗಿದೆ.ಈವರೆಗೂ ಒಟ್ಟು 496 ಜನರ ಮೇಲೆ‌ ನಿಗಾವಹಿಸಲಾಗಿದೆ. ಅದರಲ್ಲಿ 125 ಜನರಿಗೆ 14 ದಿನಗಳ ಹೋಂ ಐಸೋಲೇಷನ್‌ ಇಡಲಾಗಿದೆ.

307 ಜನರು 14 ದಿನ‌ಗಳ ಹೋಂ ಐಸೋಲೇಷನ್ ಪೂರ್ಣಗೊಳಿಸಿದ್ದಾರೆ. ಇನ್ನುಳಿದ 58 ಜನ 28 ದಿನದ ಹೋಮ್ ಐಸೋಲೇಷನ್ ಪೂರ್ಣಗೊಳಿಸಿದ್ದಾರೆ. ಈವರೆಗೂ ಒಟ್ಟು 44 ಜನರಲ್ಲಿ ಕೊರೊನಾ ನೆಗೆಟಿವ್ ವರದಿ ಬಂದಿವೆ. ಒಬ್ಬರಲ್ಲಿ ಮಾತ್ರ ಪಾಸಿಟಿವ್ ವರದಿ ಬಂದಿದೆ. ಪಾಸಿಟಿವ್ ವ್ಯಕ್ತಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Corona symptoms got three in Dharwad
ಧಾರವಾಡ ಹೆಲ್ತ್​ ಬುಲೆಟಿನ್​​

ಸಭೆಯಲ್ಲಿ ಪಾಲ್ಗೊಂಡ ಐವರಿಗೆ ಕಿಮ್ಸ್‌ನಲ್ಲಿ ಕ್ವಾರಂಟೈನ್‌: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ನವಲಗುಂದ ತಾಲೂಕಿನ ಐವರು ಪಾಲ್ಗೊಂಡಿದ್ದರು. ಅವರನ್ನೀಗ ಹುಬ್ಬಳ್ಳಿ ಕಿಮ್ಸ್‌ಗೆ ರವಾನೆ ಮಾಡಲಾಗಿದೆ. ತಹಶೀಲ್ದಾರ್‌ ನವೀನ ಹುಲ್ಲೂರ ನೇತೃತ್ವದಲ್ಲಿ ನವಲಗುಂದ ಪಟ್ಟಣದ 3 ಹಾಗೂ ಗ್ರಾಮೀಣ ಭಾಗದ ಇಬ್ಬರ ಮೇಲೂ ನಿಗಾವಹಿಸಲಾಗ್ತಿದೆ.

ಈವರೆಲ್ಲ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಆರಾಮಾಗಿ ಓಡಾಡಿಕೊಂಡಿದ್ದರು. ಇವರ ಸಂಪರ್ಕದಲ್ಲಿದ್ದವರನ್ನೂ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ. ಐವರ ಮನೆಯವರಿಗೆ 14 ದಿನಗಳ ಕ್ವಾರೈಂಟನ್‌ಗೆ ಸೂಚನೆ ನೀಡಲಾಗಿದೆ‌‌. ಮನೆಯಿಂದ ಹೊರಗೆ ಬರದಂತೆ ಕುಟುಂಬ ಸದಸ್ಯರಿಗೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.