ETV Bharat / state

ಧಾರವಾಡದ ನಾಲ್ವರಲ್ಲಿ ಕೊರೊನಾ ಶಂಕೆ: ಗಂಟಲು ದ್ರವ ಪರೀಕ್ಷೆಗೆ ರವಾನೆ - ಕೊರೊನಾ

ಧಾರವಾಡದಲ್ಲಿ ಈಗಾಗಲೇ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಇದೀಗ ಮತ್ತೆ ನಾಲ್ವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಶಿವಮೊಗ್ಗದ ಪ್ರಯೋಗಾಲಯಕ್ಕೆ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.

dharwad
ಧಾರವಾಡದ ನಾಲ್ವರಲ್ಲಿ ಕೊರೊನಾ ಶಂಕೆ
author img

By

Published : Mar 27, 2020, 11:01 PM IST

Updated : Mar 27, 2020, 11:08 PM IST

ಧಾರವಾಡ: ಜಿಲ್ಲೆಯ ನಾಲ್ಕು ಜನರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರ ಗಂಟಲು ದ್ರವದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ರವಾನೆ‌ ಮಾಡಲಾಗಿದೆ.

ಜಿಲ್ಲೆಯಲ್ಲಿ ಇಂದು ಹತ್ತು ಜನರನ್ನು ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ನಾಲ್ವರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿದೆ ಎನ್ನಲಾಗಿದೆ. ಹಾಗಾಗಿ ನಾಲ್ವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಐಸೋಲೇಷನ್​ನಲ್ಲಿ ಇಡಲಾಗಿದೆ.

Dharwad
ಧಾರವಾಡದ ನಾಲ್ವರಲ್ಲಿ ಕೊರೊನಾ ಶಂಕೆ

ಇಲ್ಲಿಯವರೆಗೆ ಒಟ್ಟು 469 ಜನರ ಮೇಲೆ‌ ನಿಗಾ ವಹಿಸಲಾಗಿದೆ. ಅದರಲ್ಲಿ 219 ಜನರನ್ನು 15 ದಿನಗಳ ಮತ್ತು 228 ಜನರನ್ನು 14 ದಿನ‌ಗಳ ಹೋಮ್ ಐಸೋಲೇಷನ್​ನಲ್ಲಿ ಇರಿಸಲಾಗಿದೆ. ಈಗಾಗಲೇ 18 ಜನರಿಂದ 28 ದಿನಗಳ‌ ಹೋಮ್ ಐಸೋಲೇಷನ್ ಪೂರ್ಣಗೊಂಡಿದೆ.

Last Updated : Mar 27, 2020, 11:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.