ETV Bharat / state

ಕೊರೊನಾ ಕಂಟ್ರೋಲ್​ ಆಗ್ತಿಲ್ಲ ಅನ್ನೋದ್ಗಿಂತ ನಮ್ಮಲ್ಲಿ ರಿಕವರಿ ಚೆನ್ನಾಗಿದೆ: ಪ್ರಲ್ಹಾದ್​ ಜೋಶಿ - Corona Recovery in India

ಬೇರೆ ಬೇರೆ ಕಂಪನಿಗಳಿಂದ ಕೊರೊನಾ ನಿಯಂತ್ರಣಕ್ಕೆ ಹಣ ಬಂದಿದೆ. 6 ಕೋಟಿ 30 ಲಕ್ಷ ಕೊರೊನಾ ನಿಯಂತ್ರಣಕ್ಕೆ ಹಣ ಬಂದಿದೆ. ಕಿಮ್ಸ್​ಗೆ ವೆಂಟಿಲೇಟರ್ ಬೇಕು ಅಂತಾ ಸರ್ಕಾರಕ್ಕೆ ಕೇಳಿದ್ದೇನೆ..

Corona Recovery Is Good In India: Pralhad Joshi
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ
author img

By

Published : Aug 8, 2020, 4:20 PM IST

ಧಾರವಾಡ: ಕೊರೊನಾ ನಮ್ಮಲ್ಲಿ ಕಂಟ್ರೋಲ್​ ಆಗ್ತಾ ಇಲ್ಲ ಅನ್ನೋದಕ್ಕಿಂತ ನಮ್ಮ ರಿಕವರಿ ಚೆನ್ನಾಗಿದೆ. ಸರ್ಕಾರದ ಮುನ್ನಚ್ಚರಿಕಾ ಕ್ರಮ, ಜನರಿಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ದೇಶಕ್ಕೆ ಹೋಲಿಸಿದರೆ ಕೊರೊನಾ ನಮ್ಮ ದೇಶದಲ್ಲಿ ಹೆಚ್ಚಿದೆ. ಆದರೆ, ಜನಸಂಖ್ಯೆಗೆ ಹೋಲಿಸಿದರೆ ಕಂಟ್ರೋಲ್ ಆಗಿದೆ. ಧಾರವಾಡದಲ್ಲಿ ಕೊರೊನಾ ಕಂಟ್ರೋಲ್​ಗಾಗಿ 10 ಕೋಟಿ ರೂ. ಬೇಕು ಎಂದು ಇಲ್ಲಿನ ಜಿಲ್ಲಾಧಿಕಾರಿ ಕೇಳಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಬೇರೆ ಬೇರೆ ಕಂಪನಿಗಳಿಂದ ಕೊರೊನಾ ನಿಯಂತ್ರಣಕ್ಕೆ ಹಣ ಬಂದಿದೆ. 6 ಕೋಟಿ 30 ಲಕ್ಷ ಕೊರೊನಾ ನಿಯಂತ್ರಣಕ್ಕೆ ಹಣ ಬಂದಿದೆ. ಕಿಮ್ಸ್​ಗೆ ವೆಂಟಿಲೇಟರ್ ಬೇಕು ಅಂತಾ ಸರ್ಕಾರಕ್ಕೆ ಕೇಳಿದ್ದೇನೆ ಎಂದರು.

ಮಳೆ ಪ್ರವಾಹದ ಪರಿಹಾರ ವಿಚಾರವಾಗಿ ಮಾತನಾಡಿದ ಅವರು, 5 ಕೋಟಿ ಹಣ ಸರ್ಕಾರದಿಂದ ಬಿಡುಗಡೆಯಾಗಿದೆ. ಎಸ್‌ಡಿಆರ್‌ಎಫ್‌ ತಂಡ ಕೂಡ ಇದೆ.‌ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.