ಹುಬ್ಬಳ್ಳಿ: ದಿನೇ ದಿನೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆಯೂ ಹೊರತಾಗಿಲ್ಲ. ಹಗಲು ರಾತ್ರಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೂ ಡೆಡ್ಲಿ ವೈರಸ್ ಕಾಡುತ್ತಿದೆ.
ಹುಬ್ಬಳ್ಳಿ - ಧಾರವಾಡ ಕಮೀಷನರೇಟ್ನಲ್ಲಿ 15 ದಿನಗಳಲ್ಲೇ 52 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ಅಲೆಗಿಂತ ಅತಿ ವೇಗವಾಗಿ ಪೊಲೀಸರಿಗೆ ಸೋಂಕು ಹರಡಿದೆ. ಕಳೆದ ವರ್ಷ ಒಬ್ಬರಿಗೆ ಸೋಂಕು ಕಾಣಿಸಿಕೊಂಡರೆ, ಇಡೀ ಪೊಲೀಸ್ ಸ್ಟೇಷನ್ನನ್ನು ಮಹಾನಗರ ಪಾಲಿಕೆ ಸ್ಯಾನಿಟೈಸ್ ಮಾಡಿತ್ತು. ಆದರೆ ಈ ಬಾರಿ ಠಾಣೆಯನ್ನ ಸ್ಯಾನಿಟೈಸ್ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಖಾಕಿಗೆ ಸೋಂಕು ಹರಡಲು ಕಾರಣ ಎನ್ನಲಾಗುತ್ತಿದೆ. ಅದರಲ್ಲೂ ಕೊರೊನಾ ಕರ್ಫ್ಯೂ ವೇಳೆ ಕಾರ್ಯನಿರ್ವಹಿಸುತ್ತಿರುವುದು ಕೂಡ ಪೊಲೀಸರಿಗೆ ಸೋಂಕು ಹೆಚ್ಚಾಗಲು ಕಾರಣವಾಗಿದೆ.
ಇದನ್ನೂ ಓದಿ : ಆಕ್ಸಿಜನ್ ಕೊರತೆ: ಅಫಜಲಪುರ ತಾಲೂಕು ಆಸ್ಪತ್ರೆಯಲ್ಲೂ ನಾಲ್ವರು ರೋಗಿಗಳು ಸಾವು!