ETV Bharat / state

ಕೋವಿಡ್​ ಸೆಂಟರ್​​ನಲ್ಲಿ ಮೂಲಸೌಕರ್ಯ ಕೊರತೆ: ಅಧಿಕಾರಿಗಳ ವಿರುದ್ಧ ಸೋಂಕಿತರ ಪ್ರತಿಭಟನೆ - New Covid Center

ಜಿಲ್ಲೆಯಲ್ಲಿ ನೂತನವಾಗಿ ಕೊರೊನಾ ರೋಗಿಗಳಿಗಾಗಿ ಆರಂಭಿಸಿದ್ದ ಕೋವಿಡ್ ಕೇರ್ ಸೆಂಟರ್​​​​ನಲ್ಲಿ ಮೂಲಭೂತ ಸೌಕರ್ಯವಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ.

corona infect people protest over lack of basic facilities at covid Center
ಕೋವಿಡ್​ ಸೆಂಟರ್​​ನಲ್ಲಿ ಮೂಲ ಸೌಕರ್ಯ ಕೊರತೆ...ಅಧಿಕಾರಿ ವಿರುದ್ಧ ಸೋಂಕಿತರ ಪ್ರತಿಭಟನೆ
author img

By

Published : Jul 16, 2020, 7:52 PM IST

ಹುಬ್ಬಳ್ಳಿ: ಮೂಲಭೂತ ಸೌಕರ್ಯ ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಕೊರೊನಾ ಸೋಂಕಿತರು ಆರೋಪಿಸಿ‌ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ಹುಬ್ಬಳ್ಳಿಯ ಘಂಟಿಕೇರಿಯಲ್ಲಿರುವ ಕೋವಿಡ್ ಸೆಂಟರ್​ನಲ್ಲಿ ನಡೆದಿದೆ.

ನೂತನವಾಗಿ ಪ್ರಾರಂಭವಾಗಿರುವ ಕೋವಿಡ್ ಸೆಂಟರ್​​ನಲ್ಲಿ ಸರಿಯಾಗಿ ಊಟ, ನೀರು‌, ಮಾತ್ರೆ ನೀಡುತ್ತಿಲ್ಲ. ವೈದ್ಯಕೀಯ ಸಿಬ್ಬಂದಿ ಇಲ್ಲದೆ ಕೋವಿಡ್ ವಾರ್ಡ್‌ನಲ್ಲಿ 60ಕ್ಕೂ ಹೆಚ್ಚು ಸೋಂಕಿತರು ಪರದಾಡುವಂತಾಗಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರಿ ವಸತಿ ಶಾಲೆಯನ್ನು ಕೋವಿಡ್ ಸೆಂಟರ್ ಆಗಿ ಬಳಕೆ ಮಾಡಿದ್ದು, ಕೊರೊನಾ ಸೋಂಕಿತರ ಕಷ್ಟ ಕೇಳುವವರೇ‌ ಇಲ್ಲದಂತಾಗಿದೆ. ಸೋಂಕಿತರು ಸಾಕಷ್ಟು ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಅಲ್ಲದೆ ಸೋಂಕಿತರು ಕೋವಿಡ್ ಸೆಂಟರ್ ಬಿಟ್ಟು ರಸ್ತೆಗೆ ಬರುವಂತಾಗಿದ್ದು, ರಸ್ತೆ ಮುಂದೆ ನಿಂತು ಪರದಾಡುವ ಪರಿಸ್ಥಿತಿ ಉದ್ಭವಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.