ಹುಬ್ಬಳ್ಳಿ: ಕೊರೊನಾ ಎಫೆಕ್ಟ್ ಕಲರ್ಫುಲ್ ಕ್ಷೇತ್ರಕ್ಕೂ ತಟ್ಟಿದ್ದು, ಮಾಡೆಲಿಂಗ್ ಶೋಗಳಿಲ್ಲದೆ ನಟರು, ಮಾಡೆಲ್ಸ್, ನೃತ್ಯ ಕಲಾವಿದರು, ಕ್ಯಾಮರಾಮನ್ಗಳು ತೊಂದರೆಗೆ ಒಳಗಾಗಿದ್ದಾರೆ.
ಕೊರೊನಾ ಬಿಸಿ ಮಾಡಲಿಂಗ್ ಕ್ಷೇತ್ರಕ್ಕೂ ತಟ್ಟಿದ್ದು, ಆದಷ್ಟು ಬೇಗ ದೇಶದಲ್ಲಿ ಕೊರೊನಾ ಹಾವಳಿ ಕಡಿಮೆಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಪ್ರಾಥಮಿಕ ಹಂತದ ಲಾಕ್ಡೌನ್ ಜಾರಿಯಾದಾಗ ಅಗತ್ಯ ವಸ್ತುಗಳು ಹೊರತುಪಡಿಸಿ ಬಹುತೇಕ ಎಲ್ಲಾ ವಹಿವಾಟು ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಪರಿಣಾಮ ಮಾಡೆಲಿಂಗ್ನಲ್ಲಿ ಏನಾದ್ರೂ ಸಾಧನೆಯ ಕನಸು ಕಾಣುತ್ತಿದ್ದ ಪ್ರತಿಭೆಗಳು ಕೊರೊನಾ ಹಾವಳಿಯಿಂದ ತಮ್ಮ ಕನಸುಗಳನ್ನು ಬಿಡುವಂತಾಗಿದೆ.
ಅಷ್ಟೇ ಅಲ್ಲದೆ ಕೊರೊನಾ ಬರುವ ಮುನ್ನ ಪ್ರಮಾಥ್ ಸ್ಟಾರ್ ಮಾಡೆಲಿಂಗ್ ಕಂಪನಿಯಂತಹ ವಿವಿಧ ಕಂಪನಿಗಳು ನೂರಾರು ಕಲಾವಿದರಿಗೆ ಉದ್ಯೋಗ ನೀಡಿದ್ದವು. ವರ್ಷದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಹಲವು ಸ್ಪರ್ಧೆಗಳು ನಡೆಯುತ್ತಿದ್ದವು. ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚಾಗಿ ಶೋ ಆಯೋಜನೆ ಮಾಡಲಾಗುತ್ತಿತ್ತು. ಈಗ ಕೊರೊನಾ ಕಳೆದ ಎರಡು ತಿಂಗಳಿನಿಂದ ದೇಶದೆಲ್ಲೆಡೆ ಹರಡಿದ ಪರಿಣಾಮ ಮಾಡೆಲಿಂಗ್ ಜಗತ್ತು ತನ್ನ ಇವೆಂಟ್ಸ್ ಕಾರ್ಯಕ್ರಮ ರದ್ದು ಮಾಡಿ ಆನ್ಲೈನ್ ಸ್ಪರ್ಧಿಗಳಿಗೆ ಅವಕಾಶ ನೀಡಿದೆ.
ಆದರೆ ನೇರವಾಗಿ ಆಯೋಜನೆ ಮಾಡುತ್ತಿದ್ದ ಕಾರ್ಯಕ್ರಮದ ಹಾಗೆ ಆನ್ಲೈನ್ನಲ್ಲಿ ಸ್ಪರ್ಧೆಗಳು ಹಾಗೂ ಕಲಾವಿದರನ್ನು ಆಯ್ಕೆ ಮಾಡುವುದು ಕಷ್ಟ ಎಂದು ಫ್ಯಾಷನ್ ಶೋ ನಡೆಸುತ್ತಿದ್ದ ಮಾಲೀಕರು ತಮ್ಮ ಮನದ ನೋವು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಆದಷ್ಟು ಬೇಗ ಕೊರೊನಾ ಹೊಡೆದೋಡಿಸಲು ಸರ್ಕಾರ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಮನವಿ ಮಾಡುತ್ತಿದ್ದಾರೆ.