ETV Bharat / state

ಕೆಲಸವಿಲ್ಲದೆ ವೃದ್ಧ ದಂಪತಿ ಕಂಗಾಲು: ಮನೆ ಬಿಡುವಂತೆ ಪಟ್ಟು ಹಿಡಿದ ಮಾಲೀಕ! - ಮನೆ ಬಿಡುವಂತೆ ಪಟ್ಟು ಹಿಡಿದ ಮಾಲೀಕ

ಲಾಕ್​ಡೌನ್​​ನಿಂದ ಕೆಲಸವಿಲ್ಲದ ಕಾರಣ ವೃದ್ಧ ದಂಪತಿ, ತಾವು ನೆಲೆಸಿರುವ ಮನೆಯ ಬಾಡಿಗೆಯ ಕಟ್ಟಲು ಆಗುತ್ತಿಲ್ಲ. ಅಮಾನವೀಯತೆ ಮೆರೆದ ಮನೆ ಮಾಲೀಕ ನೀರು ಹಾಗೂ ವಿದ್ಯುತ್ ಸಂಪರ್ಕ ಕಟ್ ಮಾಡಿ ಮನೆ ಬಿಡುವಂತೆ ಪಟ್ಟು ಹಿಡಿದಿದ್ದಾನೆ ಎಂಬ ಆರೋಪ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೇಳಿ ಬಂದಿದೆ.

corona effect on An elderly couple
ಕೆಲಸವಿಲ್ಲದೇ ವೃದ್ಧ ದಂಪತಿ ಕಂಗಾಲು
author img

By

Published : Jul 7, 2020, 8:45 PM IST

ಹುಬ್ಬಳ್ಳಿ: ಜೀವನದ ಬಂಡಿಯನ್ನು ಸಾಗಿಸಲು ರಾಟೆಯನ್ನೇ ನಂಬಿದ ಬಸವರಾಜ ಎಂಬ ವೃದ್ಧ, ಕಳೆದ 5 ವರ್ಷಗಳಿಂದ ಹುಬ್ಬಳ್ಳಿಯ ಕಾಳಿದಾಸ ನಗರದಲ್ಲಿ ಮನೆಯನ್ನು ಬಾಡಿಗೆ ಪಡೆದಿದ್ದಾನೆ. ಅಲ್ಲಿಯೇ ಟೈಲರಿಂಗ್ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ವೃದ್ಧನ ರಾಟೆಯ ಚಕ್ರಕ್ಕೆ ಮಹಾಮಾರಿ ಕೊರೊನಾ ಅಡ್ಡಿಯಾಗಿದೆ.

ನನಗೆ ಈಗ ಮಾಡಲು ಕೆಲಸವಿಲ್ಲದೇ ಹಣದ ಕೊರತೆ ಎದುರಾಗಿ ಹೊಟ್ಟೆಯನ್ನೇ ತುಂಬಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಇದ್ದೇನೆ. ಇಂತಹ ಸ್ಥಿತಿಯಲ್ಲಿ ಮನೆ ಬಾಡಿಗೆ ಕಟ್ಟಿ ಎಂದು ಮಾಲೀಕ ದುಂಬಾಲು ಬಿದ್ದಿದ್ದಾರೆ. ಇಲ್ಲವಾದರೆ ಮನೆ ಖಾಲಿ ಮಾಡಿ ಎಂದು ಮನೆಗೆ ಸರಬರಾಜು ಆಗುವ ನೀರು ಹಾಗೂ ಕರೆಂಟ್​​​ ಸಂಪರ್ಕ ಕಟ್ ಮಾಡುವುದರ ಮೂಲಕ ಮಾನವೀಯತೆ ಮರೆತಿದ್ದಾರೆ ಎಂದು ಆರೋಪಿಸಿ ವೃದ್ಧ ಬಸವರಾಜ್​ ಅಲವತ್ತಕೊಂಡರು.

ಹುಬ್ಬಳ್ಳಿಯಲ್ಲಿ ಕೆಲಸವಿಲ್ಲದೆ ವೃದ್ಧ ದಂಪತಿ ಕಂಗಾಲು

ಸಂಕಷ್ಟದ ಪರಿಸ್ಥಿತಿಯಲ್ಲಿ ಯಾರು ಸಹಾಯ ಮಾಡಿಲ್ಲ. ನಮಗೆ ರಕ್ತ ಸಂಬಂಧಿಗಳು ಇದ್ದರೂ ಪ್ರಯೋಜನವಿಲ್ಲ. ಈ ಸಂದಿಗ್ಧ ಸ್ಥಿತಿಯಲ್ಲಿ ಮನೆಯನ್ನು ಖಾಲಿ ಮಾಡು ಎಂದು ಮನೆ ಮಾಲೀಕರು ಒತ್ತಡ ಹಾಕುತ್ತಿದ್ದಾರೆ. ಈಗ ಏನು ಮಾಡಬೇಕೆಂದು ತಿಳಿಯುತ್ತಿಲ್ಲವೆಂದು ಕಣ್ಣೀರು ಹಾಕುತ್ತಿದ್ದಾರೆ ಕುಟುಂಬಸ್ಥರು.

ಕೊರೊನಾದಿಂದ ವೃದ್ಧ ದಂಪತಿಯ ಜೀವನ ಸಂಕಷ್ಟ ಸಿಲುಕಿದ್ದು, ತಮ್ಮ ಕಷ್ಟಕ್ಕೆ ಸಹಾಯ ಮಾಡುವಂತೆ ಸಹೃದಯಿಗಳಿಗೆ ಮನವಿ ಮಾಡಿದ್ದಾರೆ.

ನೆರವಾಗಲು ಇಚ್ಛಿಸುವವರು ಈ ಬ್ಯಾಂಕ್​ ಖಾತೆಗೆ ಹಣ ಹಾಕಬಹುದು:

Bank name - Indian Overseas Bank

Account holders Name - Priya Basavaraj Athadakar

Account No- 357801000001081

IFSC -IOBA0003578

Branch - Shirur Park Vidyanagar Hubli

ETV Bharat Logo

Copyright © 2025 Ushodaya Enterprises Pvt. Ltd., All Rights Reserved.