ಧಾರವಾಡ: ಜಿಲ್ಲೆಯಲ್ಲಿ ಇಂದು ಒಂದೇ ದಿನ 176 ಜನರಿಗೆ ಕೊರೊನಾ ಹರಡಿದ್ದು, ಸೋಂಕಿತರ ಸಂಖ್ಯೆ 1574ಕ್ಕೇರಿದೆ.
ಐಎಲ್ಐ ಸಮಸ್ಯೆಯಿಂದ ದಾಖಲಾದ 92 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಪರ್ಕದಿಂದ 58 ಜನರಿಗೆ ಕೊರೊನಾ ಹಬ್ಬಿದೆ. ಅಂತರ್ ಜಿಲ್ಲಾ ಪ್ರವಾಸದಿಂದ 5 ಜನರಿಗೆ ಕೋವಿಡ್ ಹರಡಿದ್ದು, 19 ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಎಸ್ಎಆರ್ಐ ಪ್ರಕರಣದಲ್ಲಿ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇಂದು 42 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 524 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1005 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 44 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.