ಧಾರವಾಡ: ಜಿಲ್ಲೆಯಲ್ಲಿ 228 ಜನರ ಪೈಕಿ 59 ಜನರ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಟಷ್ಟಪಡಿಸಿದೆ.
ಧಾರವಾಡ ಆರೋಗ್ಯ ಇಲಾಖೆಯಿಂದ ಕೊರೊನಾ ಬುಲೆಟಿನ್ ಬಿಡುಗಡೆ ಈ ಬಗ್ಗೆ ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದ್ದು, ನಿನ್ನೆಯವರೆಗೆ ದಾಖಲಾಗಿದ್ದ ಶಂಕಿತರ ಪೈಕಿ 169 ಜನರ ವರದಿ ಬಾಕಿಯಿದೆ. ಇಂದು 117 ಜನರಲ್ಲಿ ಕೊರೊನಾ ಗುಣಲಕ್ಷ್ಮಣಗಳು ಪತ್ತೆಯಾಗಿವೆ. ಒಟ್ಟು 287 ಜನರ ವರದಿ ಬಾಕಿಯಿದ್ದು, 9 ಜನರನ್ನು ಆಸ್ಪತ್ರೆಯ ಐಸೋಲೇಷನ್ನಲ್ಲಿ ಇಡಲಾಗಿದೆ.ಇಲ್ಲಿಯವರೆಗೆ ಒಟ್ಟು 2184 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. 1430 ಜನರಿಗೆ 14 ದಿನಗಳ ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗಿದೆ. 58 ಜನರು 14 ದಿನಗಳ ಐಸೋಲೇಷನ್ ಹಾಗೂ 687 ಜನರ 28 ದಿನಗಳ ಐಸೋಲೇಷನ್ ಪೂರ್ಣಗೊಂಡಿದೆ.