ETV Bharat / state

ಕೊರೊನಾ ಹಾಗೂ ಬಹು ಅಂಗಾಂಗಗಳ ವೈಫಲ್ಯ.. ಹುಬ್ಬಳ್ಳಿಯಲ್ಲಿ ಓರ್ವ ವ್ಯಕ್ತಿ ಸಾವು - Hubli

ಮಹಾರಾಷ್ಟ್ರದ ಪ್ರವಾಸ ಹಿನ್ನೆಲೆ ಹೊಂದಿದ್ದ ಇವರು ಕೊರೊನಾ ಜೊತೆಗೆ ತೀವ್ರ ಉಸಿರಾಟದ ತೊಂದರೆ, ಮಧುಮೇಹ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರು.

Corona and multiple organ failure:   man died
ಕೊರೊನಾ ಹಾಗೂ ಬಹು ಅಂಗಾಂಗಗಳ ವೈಫಲ್ಯ: ಹುಬ್ಬಳ್ಳಿಯಲ್ಲಿ ಓರ್ವ ವ್ಯಕ್ತಿ ಸಾವು
author img

By

Published : Jun 10, 2020, 7:19 PM IST

ಹುಬ್ಬಳ್ಳಿ : ಕೊರೊನಾ ಸೋಂಕು ಹಾಗೂ ಬಹು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಹುಬ್ಬಳ್ಳಿ ಗಿರಣಿ ಚಾಳ ನಿವಾಸಿ ಪಿ-1943 (58 ವರ್ಷ, ಪುರುಷ) ಜೂನ್‌ 9ರಂದು ರಾತ್ರಿ ಮೃತಪಟ್ಟಿದ್ದಾರೆ.

ಇವರು ಕೊರೊನಾ ಸೋಂಕು ದೃಢಪಟ್ಟು ಕಳೆದ ಮೇ 23ರಂದು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಾಗಿದ್ದರು. ಮಹಾರಾಷ್ಟ್ರದ ಪ್ರವಾಸ ಹಿನ್ನೆಲೆ ಹೊಂದಿದ್ದ ಇವರು ಕೊರೊನಾ ಜೊತೆಗೆ ತೀವ್ರ ಉಸಿರಾಟದ ತೊಂದರೆ, ಮಧುಮೇಹ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರು ಎನ್ನಲಾಗಿದೆ.

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಹುಬ್ಬಳ್ಳಿಯ ಹೆಗ್ಗೇರಿ ರುದ್ರಭೂಮಿಯಲ್ಲಿ ಜರುಗಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.