ETV Bharat / state

ಲ್ಯಾಪ್‍ಟಾಪ್‍ನಲ್ಲಿ ದೋಷ: ವಿದ್ಯಾರ್ಥಿಗೆ ಪರಿಹಾರ ನೀಡುವಂತೆ ಲೆನೆವೊ ಕಂಪನಿಗೆ ಗ್ರಾಹಕರ ಕೋರ್ಟ್​ ಆದೇಶ

ದೋಷಪೂರಿತ ಲ್ಯಾಪ್‍ಟಾಪ್ ಪೂರೈಸಿದ ಕಂಪನಿಗೆ ಸೇವಾ ನ್ಯೂನ್ಯತೆ ಪ್ರಕರಣದಡಿ ಖರೀದಿದಾರ ವಿದ್ಯಾರ್ಥಿಗೆ ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

consumer-court-ordered-lenovo-to-pay-compensation-student-for-error-in-laptop
ಲ್ಯಾಪ್‍ಟಾಪ್‍ನಲ್ಲಿ ದೋಷ: ವಿದ್ಯಾರ್ಥಿಗೆ ಪರಿಹಾರ ನೀಡುವಂತೆ ಲೆನೆವೊ ಕಂಪನಿಗೆ ಗ್ರಾಹಕರ ಕೋರ್ಟ್​ ಆದೇಶ
author img

By

Published : May 11, 2022, 10:11 PM IST

ಧಾರವಾಡ: ದೋಷಪೂರಿತ ಲ್ಯಾಪ್‍ಟಾಪ್ ಪೂರೈಸಿದ ಲೆನೆವೊ ಕಂಪನಿಗೆ ಸೇವಾ ನ್ಯೂನ್ಯತೆ ಪ್ರಕರಣದಡಿ ಖರೀದಿದಾರ ವಿದ್ಯಾರ್ಥಿಗೆ 52 ಸಾವಿರ ರೂ. ಪರಿಹಾರ ಒದಗಿಸಲು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಧಾರವಾಡ ನಗರದ ಹತ್ತಿಕೊಳ್ಳದ ನಿವಾಸಿ ಮಹ್ಮದ್ ಪೀರಜಾದೆ ಎಂಬ ವಿದ್ಯಾರ್ಥಿ ಲೆನೆವೊ ಕಂಪನಿಯ ಲ್ಯಾಪ್‍ಟಾಪ್‍ನ್ನು 42,499 ರೂ.ಗಳಿಗೆ 2020ರ ನವೆಂಬರ್ 22ರಂದು ಖರೀದಿಸಿದ್ದರು. ಲ್ಯಾಪ್‍ಟಾಪ್‍ನಲ್ಲಿ ದೋಷ ಕಂಡು ಬಂದ ನಂತರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.

ವಿಚಾರಣೆ ನಡೆಸಿದ ಆಯೋಗ ಕಂಪನಿಯು ಸೇವಾ ನ್ಯೂನ್ಯತೆ ಎಸಗಿದೆ ಎಂದು ನಿರ್ಣಯಿಸಿ ಲ್ಯಾಪ್‍ಟಾಪ್ ಮೌಲ್ಯ 42,499, ಸೇವಾ ನ್ಯೂನ್ಯತೆಗಾಗಿ 10 ಸಾವಿರ ರೂ.ಗಳನ್ನು ಶೇ.9ರ ಬಡ್ಡಿ ಸಹಿತವಾಗಿ ಪರಿಹಾರ ನೀಡಬೇಕು ತಿಳಿಸಿದೆ. ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿ.ಎ. ಬೋಳಶೆಟ್ಟಿ ಹಾಗೂ ಪಿ.ಸಿ. ಹಿರೇಮಠ ಅವರು ಈ ತೀರ್ಪು ನೀಡಿದ್ದಾರೆ.

ಇದನ್ನೂ ಓದಿ:ವರ್ಷದೊಳಗೇ ಮೊಮ್ಮಕ್ಕಳು ಬೇಕು.. ಇಲ್ಲವೇ ₹5 ಕೋಟಿ ಪರಿಹಾರ ಕೊಡಿ: ಸೊಸೆ - ಮಗನ ವಿರುದ್ಧ ವೃದ್ಧ ದಂಪತಿ ಕೋರ್ಟ್​ ಮೊರೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.