ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದ ಬಳಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿದೆ. ಅವಶೇಷಗಳಡಿ ಸಿಲುಕಿದ್ದ ಮತ್ತೊಂದು ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಮೃತ ವ್ಯಕ್ತಿಯನ್ನು ಸುಬ್ಬಪ್ಪ ದಿಂಡಲಕೊಪ್ಪ ಎಂದು ಗುರುತಿಸಲಾಗಿದೆ.
ಸತತ 4 ದಿನಗಳಿಂದ ರಕ್ಷಣಾ ಕಾರ್ಯ ಸಾಗುತ್ತಲೇ ಇದ್ದು, ಅವಶೇಷಗಳಡಿ ಸಿಲುಕಿದ್ದ 60ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಆದರೆ ದುರ್ವಿಧಿಗೆ ಇದೀಗ 15 ಜನ ಬಲಿಯಾಗಿದ್ದಾರೆ.
ನಿರ್ಮಾಣ ಹಂತದ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಹೆಸರುಗಳು :
- ಸಲೀಂ ಮಕಾಂದರ್ (35)
- ಅಶೀತ್ ಹಿರೇಮಠ (32)
- ಮಾಬುಸಾಬ್ ರಾಯಚೂರ (48)
- ಮೆಹಬುಸಾಬ್ ದೇಸಾಯಿ (55)
- ಮಹೇಶ್ವರಯ್ಯ ಹಿರೇಮಠ (60)
- ಅಸ್ಲಂ ಶೇಖ್ (50)
- ದಿವ್ಯಾ ಉಣಕಲ್ (8)
- ದಾಕ್ಷಾಯಿಣಿ ಮತ್ತೂರ (38)
- ಇಸ್ಮಾಯಿಲ್ ಸಾಬ್ ಟೆಕ್ಕೆದ (22)
- ಸುಬ್ಬಪ್ಪ ದಿಂಡಲಕೊಪ್ಪ
- ಅನೂಪ್ ಕುಡತರಕರ್ (23)
ಉಳಿದರವರ ಹೆಸರುಗಳು ಇನ್ನೂ ಪತ್ತೆಯಾಗಬೇಕಿದೆ.
ಪಾಲುದಾರರ ಶರಣಾಗತಿ:
ಬಹು ಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ 4 ಜನ ಪಾಲುದಾರರು ಉಪನಗರ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ಶರಣಾಗಿದ್ದಾರೆ. ಮಾಜಿ ಶಾಸಕ ವಿನಯ ಕುಲಕರ್ಣಿ ಮಾವ ಗಂಗಪ್ಪ ಶಿಂತ್ರೆ, ರವಿ ಸಬರದ, ಬಸವರಾಜ ನಿಗದಿ ಹಾಗೂ ರಾಜು ಘಾಟಿನ್ ಪೊಲೀಸರೆದುರು ಶರಣಾದರು.