ETV Bharat / state

ಧಾರವಾಡ: ಶೀಘ್ರ ಕೃಷಿ ವಿವಿಯಲ್ಲಿ ಇನ್ನೋವೇಶನ್ ಪಾರ್ಕ್ ನಿರ್ಮಾಣ - Dharwad Agricultural University

ಇನ್ನೂ ಎರಡು ತಿಂಗಳಲ್ಲಿ ಕೃಷಿ ವಿಶ್ವ ವಿದ್ಯಾಲಯದಲ್ಲಿ ಇನ್ನೋವೇಶನ್​ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ ಎಂದು ಕುಲಪತಿ ಮಹಾದೇವ ಚೆಟ್ಟಿ ಹೇಳಿದರು.

Construction of Innovation Park
ಇನ್ನೋವೇಶನ್ ಪಾರ್ಕ್ ನಿರ್ಮಾಣ
author img

By

Published : Oct 10, 2020, 5:43 PM IST

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇನ್ನೆರಡು ತಿಂಗಳಲ್ಲಿ ಇನ್ನೋವೇಶನ್ ಪಾರ್ಕ್ ನಿರ್ಮಾಣವಾಗಲಿದ್ದು ಈಗಾಗಲೇ ಸ್ಥಳ‌ ಗುರುತಿಸಲಾಗಿದೆ ಎಂದು ವಿವಿ ಕುಲಪತಿ ಮಹಾದೇವ ಚೆಟ್ಟಿ ಮಾಹಿತಿ ನೀಡಿದ್ದಾರೆ.

ಇನ್ನೊವೇಶನ್ ಲ್ಯಾಬ್ ನಿರ್ಮಾಣ ಮಾಡುವುದಾಗಿ ವಿಶ್ವಬ್ಯಾಂಕ್ ತಂಡಕ್ಕೆ ಆಶ್ವಾಸನೆ ನೀಡಿದ್ದೇವೆ.‌ ಅದರ ಕಾರ್ಯ ಪ್ರಗತಿಯಲ್ಲಿದೆ. ಲ್ಯಾಬ್​ಗಳು ಯಾವ ರೀತಿ ನಿರ್ವಹಿಸಬೇಕು ಎಂಬುದು ಸೇರಿದಂತೆ ವಿಸ್ತೃತವಾದ ವರದಿ ಸಿದ್ದಪಡಿಸಲಾಗಿದೆ ಎಂದರು.

ವಿವಿ ಕುಲಪತಿ ಮಹಾದೇವ ಚೆಟ್ಟಿ

ವಿದ್ಯಾರ್ಥಿಗಳಿಗೆ ಸ್ಟಾರ್ಟ್ಅಪ್ ಉತ್ತೇಜನ ನೀಡಲು ಬಹಳ ಅನುಕೂಲವಾಗಲಿದೆ. ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ತರಬೇತಿ, ವೆಬಿನಾರ್​ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದಲೂ ಕೋಟಿಗಟ್ಟಲೇ ಅನುದಾನ ಬಂದಿದೆ. ಅದರಲ್ಲಿ ವಿದ್ಯಾರ್ಥಿಗಳಿಗೆ ಸ್ಟಾರ್ಟ್ಅಪ್ ಕುರಿತು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.