ETV Bharat / state

ದೇವಾಲಯ ಪ್ರವೇಶಕ್ಕೆ ತಡೆ: ಎಎಸ್​ಐ-ಕಾನ್ಸ್​​ಟೇಬಲ್​ ನಡುವೆ ಮಾತಿನ ಚಕಮಕಿ - Keshwapur Police Station Hubli

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗಾಳಿ ದುರ್ಗಮ್ಮ ದೇವಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಮಾಡಿದ್ದು, ದೇವಾಲಯದ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ನಡುವೆಯೂ ಕೇಶ್ವಾಪುರ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್​​ ಒಬ್ಬರು ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದಾರೆ. ಆಗ ಅಲ್ಲೇ ಇದ್ದ ಎಎಸ್​ಐ ಒಳಗೆ ಹೋಗದಂತೆ ತಡೆದಿದ್ದಾರೆ.

Hubli
ಎಎಸ್​ಐ ಜೊತೆ ಕಾನ್​ಸ್ಟೇಬಲ್​ ವಾದ
author img

By

Published : Jul 7, 2020, 7:57 PM IST

ಹುಬ್ಬಳ್ಳಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗಾಳಿ ದುರ್ಗಮ್ಮ ದೇವಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಮಾಡಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರನ್ನು ಬ್ಯಾರಿಕೇಡ್ ಹಾಕಿ ತಡೆಯಲಾಗಿದೆ. ಆದ್ರೆ ಕೇಶ್ವಾಪುರ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್​ ಒಬ್ಬರು ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

ದೇವಾಲಯಕ್ಕೆ ತೆರಳುತ್ತಿದ್ದ ಕಾನ್ಸ್​​ಟೇಬಲ್​​ ಗುಳೇಶ್​ರನ್ನು ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಒಳಗೆ ಹೋಗದಂತೆ ತಡೆದಿದ್ದಾರೆ. ಆದ್ರೆ ಅವರಿಗೆ ದಬಾಯಿಸಿ ಗುಳೇಶ್ ಬ್ಯಾರಿಕೇಡ್ ತೆಗೆದು‌ ಒಳ ಹೋಗಲು ಮುಂದಾದಾಗ ಅಲ್ಲೇ ಇದ್ದ ಎಎಸ್​ಐ ಒಳಗೆ ಹೋಗದಂತೆ ತಡೆದಿದ್ದಾರೆ.

ಎಎಸ್​ಐ-ಕಾನ್ಸ್​ಟೇಬಲ್​ ನಡುವೆ​ ಮಾತಿನ ಚಕಮಕಿ

ಈ ಸಮಯದಲ್ಲಿ ಎಎಸ್​ಐ ಹಾಗೂ ಕಾನ್ಸ್​​ಟೇಬಲ್​​ ನಡುವೆ ಮಾತಿನ ಚಕಮಕಿ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.