ಧಾರವಾಡ: ಧಾರವಾಡ ಜಿಲ್ಲೆ ಮತ್ತು ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ವಲಸೆ ಕಾರ್ಮಿಕರು ಹಾಗೂ ಹೊರಗಡೆಯಿಂದ ಬಂದವರಿಂದ ಹಲವು ಜಿಲ್ಲೆಗಳಲ್ಲಿ ಸೋಂಕು ಹೆಚ್ಚಿದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಬಂದವರಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದನ್ನು ಹೊರತುಪಡಿಸಿದರೆ ಉಳಿದವರ ವರದಿ ನೆಗೆಟಿವ್ ಬಂದಿದೆ ಎಂದರು.
ಬಿಜೆಪಿಯಿಂದ ರಾಜ್ಯಕ್ಕೆ ಭವಿಷ್ಯವಿಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ಕಾಂಗ್ರೆಸ್ಗೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಭವಿಷ್ಯ ಇಲ್ಲ ಎಂದು ಜನ ಮನೆಗೆ ಕಳಿಸಿದ್ದಾರೆ. ಅವರು ರಾಹುಲ್ ಗಾಂಧಿಯಂಥ ನಾಯಕನನ್ನು ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ. ಬಹುಶಃ ಕಾಂಗ್ರೆಸ್ಗೆ ಏನೂ ಭವಿಷ್ಯ ಇಲ್ಲ. ಅದು ಅವರ ಹಣೆಬರಹ, ಏನು ಮಾಡೋಕಾಗಲ್ಲ ಎಂದು ತಿವಿದರು.
ನಮ್ಮ ರಾಜ್ಯ ಬಿಟ್ಟು ಬಿಡಿ, ದೇಶದಲ್ಲೇ ಅವರಿಗೆ ಭವಿಷ್ಯ ಇಲ್ಲವಾಗಿದೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರ ಪಕ್ಷಕ್ಕೆ ಒಬ್ಬರು ನಾಯಕರು ಬೇಕು. ಪಕ್ಷ ಕಟ್ಟಿ ಬೆಳೆಸುವುದು ಅವರಿಗೆ ಬಿಟ್ಟ ವಿಚಾರವೆಂದು ಶೆಟ್ಟರ್ ಹರಿಹಾಯ್ದರು.