ಹುಬ್ಬಳ್ಳಿ: ಕಾಂಗ್ರೆಸ್ ಪ್ರಮುಖ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿಅಂದಾಜು 554 ಕಿ.ಮೀ. ಅಂತರದ ಪಾದಯಾತ್ರೆಯಲ್ಲಿ ಚಪ್ಪಲಿ ಹಾಕಿಕೊಳ್ಳದೇ ಬರಿಗಾಲಲ್ಲಿ ಸಂಚರಿಸಿ ಗ್ರಾಪಂ ಸದಸ್ಯರೊಬ್ಬರು ಸಾಧನೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಪಂ ಸದಸ್ಯ ಹನಮಂತಪ್ಪ ಲಕ್ಷ್ಮೇಶ್ವರ ಎಂಬುವರು ಪಾದಯಾತ್ರೆಯಲ್ಲಿ ಭಾಗವಹಿಸಿದವರು. ಅವರು ಭಾರತ ಜೋಡೋ ಯಾತ್ರೆಯಲ್ಲಿ ಚಪ್ಪಲಿ ಧರಿಸದೇ ಗುಂಡ್ಲುಪೇಟೆಯಿಂದ ಆಂಧ್ರಪ್ರದೇಶ, ತೆಲಂಗಾಣದವರೆಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಮೇಲೆ ಪ್ರೀತಿ ಅಭಿಮಾನ: ಧಗೆ ಧಗೆ ಬಿಸಿಲಿಗೆ ರಸ್ತೆ ಕಾಯ್ದರೂ, ಅಲ್ಲಲ್ಲಿ ಸಣ್ಣ ಕಲ್ಲು ಚುಚ್ಚಿದರೂ ಯಾವುದನ್ನೂ ಲೆಕ್ಕಿಸದೇ ಚಪ್ಪಲಿ ಹಾಕಿಕೊಳ್ಳದೇ ಅಂದಾಜು 554 ಕಿಮೀ ದೂರು ಪಾದಯಾತ್ರೆ ಮಾಡಿರುವ ಹನುಮಂತಪ್ಪ ಎಲ್ಲರ ಗಮನಸೆಳೆದಿದ್ದಾರೆ. ಚಪ್ಪಲಿ ಧರಿಸದಿರುವುದು ತಮಗೆ ಕಾಂಗ್ರೆಸ್ ಬಗ್ಗೆ ಇರುವ ಪ್ರೀತಿ , ಅಭಿಮಾನ ಎಂದು ಈಟಿವಿ ಭಾರತ್ ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂಓದಿ:ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ