ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮಹಾನಗರ ಪಾಲಿಕೆ ಷರತ್ತುಬದ್ಧ ಅನುಮತಿ ಕೊಟ್ಟಿದೆ. ಎಐಎಂಐಎಂ ಮುಖಂಡ ವಿಜಯ ಗುಂಟ್ರಾಳ ಕೋರಿಕೆ ಮನ್ನಿಸಿ ಅವಕಾಶ ಕಲ್ಪಿಸಲಾಗಿತ್ತು. ಶಾಂತಿ ಸುವ್ಯವಸ್ಥೆ ಕಾಪಾಡಲು ಮೈದಾನದ ಸುತ್ತಮುತ್ತ ಪೊಲೀಸ್ ಕಣ್ಗಾವಲು ಹಾಕಲಾಗಿದೆ.
ಷರತ್ತುಗಳೇನು?:
- 10 ಸಾವಿರ ರೂಪಾಯಿ ಶುಲ್ಕ ಭರಿಸಬೇಕು.
- 20 ಅಡಿ ಉದ್ದ 30 ಅಡಿ ಅಗಲ ಪೆಂಡಾಲ್ ಹಾಕಬೇಕು.
- 3 ಬೈ 5 ಅಡಿ ಅಳತೆಯ ಟಿಪ್ಪು ಭಾವಚಿತ್ರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
- ಇದರ ಹೊರತಾಗಿ ಬೇರೆ ಯಾವುದೇ ಬಾವುಟ, ಧ್ವಜ, ಭಾವಚಿತ್ರ ಪ್ರದರ್ಶಿಸುವಂತಿಲ್ಲ.
- ಈದ್ಗಾ ಮೈದಾನದಲ್ಲಿರುವ ಆಸ್ತಿಗೆ ಯಾವುದೇ ಧಕ್ಕೆ ತರಬಾರದು.
- ಜಯಂತಿ ವೇಳೆ ಗಲಭೆ, ಗೊಂದಲಗಳಿಗೆ ಅವಕಾಶ ಮಾಡಬಾರದು.
- ಮಧ್ಯಾಹ್ನ 12 ಗಂಟೆಗೆ ಟಿಪ್ಪು ಜಯಂತಿ ಆಚರಣೆಗೆ ಅವಕಾಶ.
ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಪಾಲಿಕೆ ಅವಕಾಶ.. ಕಾಂಗ್ರೆಸ್, ಎಐಎಂಐಎಂ ಆಕ್ಷೇಪ