ETV Bharat / state

ಹಣ ಡಬಲ್ ಮಾಡುವ ಆಸೆ ತೋರಿಸಿ ಮಹಿಳೆಗೆ 21 ಲಕ್ಷ ರೂ. ವಂಚನೆ - ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದಾಗಿ ಮಹಿಳೆಗೆ ಬವಂಚನೆ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಾಗಿ ನಂಬಿಸಿ ಬರೋಬ್ಬರಿ 21 ಲಕ್ಷ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಆದರೆ, ಬಳಿಕ ಹಣ ಕೇಳಿದಾಗ ವಾಪಸ್ ನೀಡಲು ಸತಾಯಿಸಿದ್ದು ಈ ಹಿನ್ನೆಲೆ ದೂರು ದಾಖಲಾಗಿದೆ..

complaint-registered-against-3-for-cheating-21-lakh-from-woman
ಹಣ ಡಬಲ್ ಮಾಡುವ ಆಸೆ ತೋರಿಸಿ ಮಹಿಳೆಗೆ 21 ಲಕ್ಷ ರೂ. ವಂಚನೆ
author img

By

Published : Dec 18, 2021, 5:06 PM IST

ಹುಬ್ಬಳ್ಳಿ : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ದುಪ್ಪಟ್ಟು ಮಾಡಿಕೊಡುತ್ತೇವೆ ಎಂದು ಮಹಿಳೆಯೊಬ್ಬರಿಂದ 21 ಲಕ್ಷ ರೂಪಾಯಿ ಪಡೆದು ವಂಚನೆ ಎಸಗಿರುವ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಮಿತಾ ಎಂಬಾಕೆಗೆ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿ ವಂಚನೆ ಎಸಗಿರುವುದಾಗಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಮೊದಲು ಪರಿಚಿತಳಾದ ಅಕ್ಕಮ್ಮ ಎಂಬುವಳು ಬೆಳಗಾವಿಯ ಶಿವಪುತ್ರಯ್ಯನನ್ನು ಪರಿಚಯಿಸಿದ್ದಾಳೆ. ಆತ ನಿಮ್ಮ ಹಣವನ್ನು ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಮಾಡಿ ಕೊಡುವೆ ಎಂದು ನಂಬಿಸಿ ತನ್ನ ಬ್ಯಾಂಕ್ ಖಾತೆಗೆ 3 ಲಕ್ಷ ರೂ. ಹಾಕಿಸಿಕೊಂಡಿದ್ದಾನೆ.

ತದನಂತರ ಅಕ್ಕಮ್ಮಳ ಮೂಲಕ ಪರಿಚಿತಳಾದ ಜಾಹೀದಾ ಬೇಗಂ ಎಂಬುವಳು ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡುವುದಾಗಿ 18 ಲಕ್ಷ ರೂ. ಪಡೆದುಕೊಂಡಿದ್ದಾಳೆ. ಮೂವರು ಸೇರಿ 21 ಲಕ್ಷ ರೂ. ಪಡೆದು ವಾಪಸ್ ಕೊಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: 4 ದಿನಗಳ ಹಿಂದೆಯಷ್ಟೇ ಪ್ರೇಮ ವಿವಾಹವಾಗಿದ್ದ ಯುವತಿ ಲಾಡ್ಜ್​ನಲ್ಲಿ ಆತ್ಮಹತ್ಯೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.