ಹುಬ್ಬಳ್ಳಿ: ಮತದಾನ ಗೌಪ್ಯತೆ ಕಾಪಾಡದ ವಿವಿಧ ಪಕ್ಷಗಳ ಒಟ್ಟು ಮೂರು ಜನರ ವಿರುದ್ಧ ಪ್ರತ್ಯೇಕ ದೂರು ದಾಖಲಾಗಿವೆ.
ಮತದಾನ ಮಾಡುವುದನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿದ ಕೈ ಮುಖಂಡ ರಜತ್ ಉಳ್ಳಾಗಡ್ಡಿ ಮಠ, ರಜನೀ ಬಿಜವಾಡ್ ಹಾಗೂ ಬಿಜೆಪಿ ಕಾರ್ಯಕರ್ತ ಮಂಜು ಮ್ಯಾಗೇರಿ ವಿರುದ್ಧ ದೂರು ದಾಖಲಾಗಿವೆ.
ಕಾಂಗ್ರೆಸ್ ಹಾಗೂ ಬಿಜೆಪಿಯ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗೆ ವೋಟ್ ಮಾಡಿದ್ದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ತಹಶೀಲ್ದಾರ್ ಶಶಿಧರ ಮಾಡ್ಯಾಳ್ ಅವರು ಹುಬ್ಬಳ್ಳಿಯ ಉಪ ನಗರ, ಗೋಕುಲ್ ರೋಡ್, ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಮೂರು ಪ್ರತ್ಯೇಕ ದೂರು ದಾಖಲಿಸಿದ್ದಾರೆ.