ಧಾರವಾಡ: ಕೃಷಿ ವಿವಿ ಇಬ್ಬರು ಯುವತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಯ ಇಬ್ಬರು ಸಿಬ್ಬಂದಿ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿದೆ.
ಜನವರಿ 30, 2021 ರಂದು ನಡೆದ ರಸ್ತೆ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇಬ್ಬರು ಯುವತಿಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪ್ರತಿಭಾ ಶಿವಾಜಿ ಗೊಂದಳಿ ಎಂಬುವರು ದೂರು ನೀಡಿದ ಹಿನ್ನೆಲೆ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃಷಿ ವಿವಿ ಕುಲಪತಿ ಆಪ್ತ ಸಹಾಯಕ ಎಂ ಎ ಮುಲ್ಲಾ, ಉಳವಪ್ಪ ಮೇಸ್ತ್ರಿ ವಿರುದ್ಧ ಐಪಿಸಿ ಸೆಕ್ಷನ್ 354 (ಎ) 376, 302, 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಯಲ್ಲಿ ಕೃಷಿ ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆರೋಪಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಯುವತಿಯರನ್ನು ಗೋವಾಗೆ ಕರೆದುಕೊಂಡು ಹೋಗಿದ್ರು ಎನ್ನಲಾಗ್ತಿದೆ. ಮರಳಿ ಬರುವಾಗ ಅಂಕೋಲಾ ಬಳಿ ಅಪಘಾತದಲ್ಲಿ ಓರ್ವ ಯುವತಿ ಮೃತಪಟ್ಟಿದ್ದಳು. ಇನ್ನೋರ್ವ ಯುವತಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಈ ಹಿಂದೆ ಕನ್ನಡಪರ ಸಂಘಟನೆಯವರು ಒತ್ತಾಯಿಸಿ ಹೋರಾಟ ಸಹ ನಡೆಸಿದ್ದರು. ಸದ್ಯ ಇಬ್ಬರ ವಿರುದ್ಧ ದೂರು ದಾಖಲಾಗಿದೆ.