ETV Bharat / state

ಸಿಎನ್​ಜಿ ಭರ್ತಿ ಮಾಡುವ ಕೇಂದ್ರಗಳು ಇದೀಗ ಹುಬ್ಬಳ್ಳಿ-ಧಾರವಾಡದಲ್ಲೂ ಲಭ್ಯ - CNG filling stations

ನೈಸರ್ಗಿಕ ಅನಿಲ ವಿತರಣಾ ಜಾಲಗಳನ್ನು ಈಗ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನೆಟ್​ವರ್ಕ್ ಗ್ಯಾಸ್​ ಘಟಕದ ಮುಖ್ಯಸ್ಥರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಇನ್ಮುಂದೆ ಹುಬ್ಬಳ್ಳಿ-ಧಾರವಾಡದಲ್ಲೂ ಸಿಎನ್​ಜಿ ಭರ್ತಿ ಮಾಡುವ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

ಸಿಎನ್​ಜಿ ಭರ್ತಿ ಮಾಡುವ ಕೇಂದ್ರಗಳು ಇದೀಗ ಹುಬ್ಬಳ್ಳಿ-ಧಾರವಾಡದದಲ್ಲಿ ಲಭ್ಯ
author img

By

Published : Sep 18, 2019, 9:32 PM IST

ಹುಬ್ಬಳ್ಳಿ: ಭಾರತೀಯ ತೈಲ ನಿಗಮ ಕಂಪನಿ, ದೇಶದ ಪ್ರಮುಖ ರಾಷ್ಟ್ರೀಯ ತೈಲ ಕಂಪನಿ ಮತ್ತು ಪ್ರತಿಷ್ಠಿತ ಫಾರ್ಚೂನ್ ಗ್ಲೋಬಲ್ 500 ಲಿಸ್ಟಿಂಗ್‌ನಲ್ಲಿ ಅತ್ಯುನ್ನತ ಶ್ರೇಯಾಂಕಿತ ಭಾರತೀಯ ಕಂಪನಿಯ ಜಂಟಿ ಉದ್ಯಮ ಮತ್ತು ಅದಾನಿ ಗ್ಯಾಸ್ ಲಿಮಿಟೆಡ್ ಕಂಪನಿಗಳ ಸಹಯೋಗದಲ್ಲಿ ನಗರಗಳಲ್ಲಿ ಅನಿಲ ವಿತರಣೆ ಉದ್ದೇಶದೊಂದಿಗೆ ಜಂಟಿ ಉದ್ಯಮ ಕಂಪನಿಯನ್ನು ರಚಿಲಾಗಿದೆ.

ಕೈಗಾರಿಕಾ, ವಾಣಿಜ್ಯ, ಮನೆಗಳಿಗೆ ಮತ್ತು ಸಾರಿಗೆ ಕ್ಷೇತ್ರದ ಗ್ರಾಹಕರಿಗೆ ಸುರಕ್ಷಿತ, ಅನುಕೂಲಕರ, ವಿಶ್ವಾಸಾರ್ಹ ಹಾಗೂ ಪರಿಸರ ಸ್ನೇಹಿ ಇಂಧನವನ್ನು (ನೆಟ್‌ವರ್ಕ್ ಗ್ಯಾಸ್) ಒದಗಿಸಲು ನೈಸರ್ಗಿಕ ಅನಿಲ ವಿತರಣಾ ಜಾಲಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಘಟಕದ ಮುಖ್ಯಸ್ಥ ಅರುಣ ನಾಯಕ್ ಮಾಹಿತಿ ನೀಡಿದ್ದಾರೆ.

ಸಿಎನ್​ಜಿ ಭರ್ತಿ ಮಾಡುವ ಕೇಂದ್ರಗಳು ಇದೀಗ ಹುಬ್ಬಳ್ಳಿ-ಧಾರವಾಡದದಲ್ಲೂ ಲಭ್ಯ

ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹುಬ್ಬಳ್ಳಿ- ಧಾರವಾಡದಲ್ಲಿ ಒಟ್ಟು 205 ಕೋಟಿ ರೂ. ವೆಚ್ಚದಲ್ಲಿ ಕಳೆದ ಸೆಪ್ಟೆಂಬರ್ 2015 ರಲ್ಲಿಯೇ ಸಿಜಿಡಿ ನೆಟ್​ವರ್ಕ್ ಸ್ಥಾಪಿಸಲು ಪಿಎನ್​ಜಿಆರ್​ಬಿಯಿಂದ ಅನುಮತಿ ಪಡೆಯಲಾಗಿತ್ತು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಐಓಎಜಿಪಿಎಲ್ 158 ಕಿಲೋಮೀಟರ್ ಪೈಪ್‌ಲೈನ್​ಅನ್ನು ಅಳವಡಿಸಿದೆ. ಒಟ್ಟು ಅವಳಿನಗರದಲ್ಲಿ 40 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಪಿಎನ್​ಜಿ ಅನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಇನ್ನು ಪರಿಸರ ಸ್ನೇಹಿ ಇಂಧನವನ್ನು ಗ್ರಾಹಕರ ಮನೆ ಬಾಗಿಲಿಗೆ ಕೊಂಡೊಯ್ಯುವ ಯೋಜನೆಯ ಭಾಗವಾಗಿ, 158 ಕಿ.ಮೀ ಗಿಂತಲೂ ಹೆಚ್ಚು ಉಕ್ಕಿನ ಮತ್ತು ಮಧ್ಯಮ-ಸಾಂದ್ರತೆಯ ಪಾಲಿಥಿನ್ (ಎಂಡಿಪಿ) ಕೊಳವೆಗಳನ್ನು ಹುಬ್ಬಳ್ಳಿ-ಧಾರವಾಡ ಭೌಗೋಳಿಕ ಪ್ರದೇಶದಲ್ಲಿ ಹಾಕಲಾಗಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ ಇಂಧನವನ್ನು ಬಳಸುವಂತೆ ಮನವಿ ಮಾಡಿದರು. ಈ ವೇಳೆ ಉಮೇಶ್ ಮೆಟ್ಟಣ್ಣವರ, ಬಸವರಾಜ, ಅನಿಶ್​ ಮುತಾಲಿಕ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Intro:ಹುಬ್ಬಳಿBody:ಸಿಎನ್ ಜಿ ಭರ್ತಿ ಮಾಡುವ ಕೇಂದ್ರಗಳು ಈಗ ಹುಬ್ಬಳ್ಳಿ- ಧಾರವಾಡದದಲ್ಲಿ ಲಭ್ಯ

ಹುಬ್ಬಳ್ಳಿ:- ಭಾರತೀಯ ತೈಲ ನಿಗಮದ ಕಂಪನಿ, ಭಾರತದ ಪ್ರಮುಖ ರಾಷ್ಟ್ರೀಯ ತೈಲ ಕಂಪನಿ ಮತ್ತು ಪ್ರತಿಷ್ಠಿತ ಫಾರ್ಚೂನ್ ಗ್ಲೋಬಲ್ 500 ಲಿಸ್ಟಿಂಗ್‌ನಲ್ಲಿ ಅತ್ಯುನ್ನತ ಶ್ರೇಯಾಂಕಿತ ಭಾರತೀಯ ಕಂಪನಿಯ ಜಂಟಿ ಉದ್ಯಮ ಮತ್ತು ಅದಾನಿ ಗ್ಯಾಸ್ ಲಿಮಿಟೆಡ್ ಕಂಪನಿಗಳ ಸಹಯೋಗದಲ್ಲಿ ಪ ನಗರಗಳಲ್ಲಿ ಅನಿಲ ವಿತರಣೆ ಉದ್ದೇಶದೊಂದಿಗೆ ಜಂಟಿ ಉದ್ಯಮ ಕಂಪನಿಯನ್ನು ರಚಿಸಿದ್ದು, ಕೈಗಾರಿಕಾ, ವಾಣಿಜ್ಯ, ಮನೆಗಳಿಗೆ ಮತ್ತು ಸಾರಿಗೆ ಕ್ಷೇತ್ರದ ಗ್ರಾಹಕರಿಗೆ ಸುರಕ್ಷಿತ, ಅನುಕೂಲಕರ, ವಿಶ್ವಾಸಾರ್ಹ ಹಾಗೂ ಪರಿಸರ ಸ್ನೇಹಿ ಇಂಧನವನ್ನು (ನೆಟ್‌ವರ್ಕ್ ಗ್ಯಾಸ್) ಒದಗಿಸಲು ನೈಸರ್ಗಿಕ ಅನಿಲ ವಿತರಣಾ ಜಾಲಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಯುನಿಟ್ ಹೆಡ್ ಅರುಣ ನಾಯಕ್ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹುಬ್ಬಳ್ಳಿ- ಧಾರವಾಡದಲ್ಲಿ ಒಟ್ಟು 205 ಕೋಟಿ ವೆಚ್ಚದಲ್ಲಿ ಸಿಜಿಡಿ ಯೋಜನೆಯನ್ನು
ಕಳೆದ ಸೆಪ್ಟೆಂಬರ್ 2015 ರಲ್ಲಿಯೇ ಸಿಜಿಡಿ ನೆಟ್ವರ್ಕ್ ಸ್ಥಾಪಿಸಲು ಪಿಎನ್ ಜಿಆರ್ ಬಿಯಿಂದ ಅನುಮತಿ ಪಡೆಯಲಾಗಿದ್ದು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಐಓಎಜಿಪಿಎಲ್ 158 ಕಿಲೋಮೀಟರ್ ಪೈಪ್‌ಲೈನ್ ನ್ನು ಅಳವಡಿಸಿದೆ. ಒಟ್ಟು ಅವಳಿನಗರದಲ್ಲಿ 40.000 ಕ್ಕೂ ಹೆಚ್ಚು ಗ್ರಾಹಕರಿಗೆ ಪಿಎನ್ ಜಿ ಅನ್ನು ಒದಗಿಸುವ ಉದ್ದೇಶ ಹೊಂದಿದೆ. ಅಲ್ಲದೇ 2021 ರ ವೇಳೆಗೆ 10 ಸಿಎನ್ ಜಿ ನಿಲ್ದಾಣದ ಮೂಲಕ ವಾಹನಗಳಿಗೆ ಸಿಎನ್ ಜಿಯನ್ನು ಒದಗಿಸುತ್ತದೆ ಎಂದರು.ಇನ್ನೂ ಪರಿಸರ ಸ್ನೇಹಿ ಇಂಧನವನ್ನು ಗ್ರಾಹಕರ ಮನೆ ಬಾಗಿಲಿಗೆ ಕೊಂಡೊಯ್ಯುವ ಯೋಜನೆಯ ಭಾಗವಾಗಿ 158 ಕಿ.ಮೀ.ಗಿಂತಲೂ ಹೆಚ್ಚು ಉಕ್ಕಿನ ಮತ್ತು ಮಧ್ಯಮ-ಸಾಂದ್ರತೆಯ ಪಾಲಿಥಿನ್ (ಎಂಡಿಪಿ) ಕೊಳವೆಗಳನ್ನು ಹುಬ್ಬಳ್ಳಿ-ಧಾರವಾಡ ಭೌಗೋಳಿಕ ಪ್ರದೇಶದಲ್ಲಿ ಹಾಕಲಾಗಿದೆ ಎಂದರು. ಸಾರ್ವಜನಿಕರು ಪರಿಸರ ಸ್ನೇಹಿ ಇಂಧನವನ್ನು ಬಳಕೆ ಮಾಡಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಮೆಟ್ಟನವರ, ಬಸವರಾಜ, ಅನಿಷ ಮುತಾಲಿಕ್ ಸೇರಿದಂತೆ ಮುಂತಾದವರು ಇದ್ದರು.

________________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.