ಹುಬ್ಬಳ್ಳಿ: ರಾಜ್ಯದಲ್ಲಿ ಮೀಸಲಾತಿ ಹೋರಾಟ ನಡೆಯುತ್ತಿದ್ದು, ಸಿಎಂ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಇದಕ್ಕಾಗಿಯೆ ಸಂವಿಧಾನ, ಹಿಂದುಳಿದ ಆಯೋಗವಿದೆ, ನೋಡೋಣ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಶಾಸಕ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಿದ ವಿಚಾರವಾಗಿ ನಾನು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.
ಇನ್ನು ಮೂರು ಸಾವಿರ ವಿವಾದದ ಕುರಿತಂತೆ ಪ್ರತಿಕ್ರಿಯಿಸಿ, ಮಠದ ಬಗ್ಗೆ ನಾನು ಮಾತನಾಡೋದಿಲ್ಲ. ಮಠದ ಉನ್ನತ ಮಟ್ಟದ ಕಮಿಟಿ ಸಭೆ ಕರೆಯುತ್ತೇವೆ ಎಂದರು.
ಜಗತ್ ಪ್ರಸಿದ್ಧ ಟೆಸ್ಲಾ ಕಂಪನಿ ರಾಜ್ಯಕ್ಕೆ ಬರುತ್ತಿದೆ. ಅವರು ತಮ್ಮ ಕಮರ್ಷಿಯಲ್ ಚಟುವಟಿಕೆಗಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಎಲ್ಲಾ ನೆರವು ನೀಡುತ್ತೇವೆ. ಅವರು ಏನಾದರೂ ಎಲೆಕ್ಟ್ರಿಕಲ್ ವಾಹನ ಉತ್ಪಾದನೆ ಮಾಡಿದರೆ ನಮ್ಮ ಸರ್ಕಾರ ಸಹಾಯ ಮಾಡುತ್ತದೆ ಎಂದು ಭರವಸೆ ನೀಡಿದರು.
ಕೊರೊನಾ ಹಂತ-ಹಂತವಾಗಿ ಕಡಿಮೆ ಆಗುತ್ತಿರುವುದರಿಂದ ಎಲ್ಲಾ ಕಂಪೆನಿಗಳು ಮತ್ತೆ ಉತ್ಪಾದನೆ ಶುರು ಮಾಡಿವೆ. ಜಿಲ್ಲೆಗೂ ಏಕಸ್ ಸೇರಿದಂತೆ ಹಲವು ಕಂಪನಿಗಳು ಬರುತ್ತಿವೆ. ಹುಬ್ಬಳ್ಳಿ- ಧಾರವಾಡ ಬೈಪಾಸ್ ಅಗಲೀಕರಣ ಮಾಡೋಕೆ ಆದೇಶ ನೀಡಿದ್ದಾರೆ ಎಂದರು.
ಓದಿ: ನಮ್ಮ ನಮ್ಮಲ್ಲಿ ಸಂಘರ್ಷ ಒಳ್ಳೆದಲ್ಲ ಎಂದು ಯತ್ನಾಳ್ಗೆ ಹೇಳಿದ್ದೆ: ರೇಣುಕಾಚಾರ್ಯ
ದ್ವಿಪಥ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಪರಿವರ್ತನೆ ಮಾಡುವ ವಿಚಾರವಾಗಿ ಬೇಗ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಖೇಣಿಯವರಿಗೂ ಹೇಳಿದ್ದಾರೆ. ಭೂಸ್ವಾಧೀನ ಮಾಡಬೇಕೆಂದು ಸ್ವತಃ ಗಡ್ಕರಿಯರವರೆ ಡಿಸಿಗೆ ಹೇಳಿದ್ದಾರೆ.
ಸುಮಾರು 1,200 ಕೋಟಿ ವೆಚ್ಚದಲ್ಲಿ ಒಟ್ಟು 30 ಕಿಲೋ ಮೀಟರ್ ರಸ್ತೆ ಅಗಲೀಕರಣ ಆಗುತ್ತದೆ. ಎರಡೂವರೆ ವರ್ಷದಲ್ಲಿ ರಸ್ತೆ ಕಾಮಗಾರಿ ಮುಗಿಯಲಿದೆ ಎಂದರು.