ETV Bharat / state

ಸಿಎಂ ಬದಲಾವಣೆ ಚರ್ಚೆಯಿಂದ ಸರ್ಕಾರದ ಇಮೇಜ್​ಗೂ ಡ್ಯಾಮೇಜ್: ಶೆಟ್ಟರ್ - Hubli

ಯಾವುದೋ ವ್ಯವಸ್ಥೆಯಲ್ಲಿ ಪರ್ಯಾಯ ನಾಯಕರು ಇರ್ತಾರೆ‌. ಅದನ್ನೇ ಸಿಎಂ ಹೇಳಿರುವಂತದ್ದು. ವಯಸ್ಸು ಅವರ ಕೆಲಸಕ್ಕೆ ಏನೂ ಅಡ್ಡಿ ಬಂದಿಲ್ಲ. ಸಹಿ ಸಂಗ್ರಹ ವಿಚಾರ ಕೂಡಾ ನನ್ನ ಗಮನಕ್ಕೆ ಬಂದಿಲ್ಲ -ಸಚಿವ ಜಗದೀಶ್ ಶೆಟ್ಟರ್.

Jagadish Shettar
ಸಚಿವ ಜಗದೀಶ್ ಶೆಟ್ಟರ್
author img

By

Published : Jun 7, 2021, 12:34 PM IST

ಹುಬ್ಬಳ್ಳಿ: ನಾಯಕತ್ವ ಬದಲಾವಣೆ ಪದೇ ಪದೇ ಯಾಕೆ ಚರ್ಚೆಯಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಇದರಿಂದ ಸರ್ಕಾರದ ಇಮೇಜ್​ಗೂ ಡ್ಯಾಮೇಜ್ ಆಗುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ

ನಗರದಲ್ಲಿಂದು ಮಾತನಾಡಿದ ಅವರು, ಈ ಚಟುವಟಿಕೆಯಿಂದ ನಮಗೂ ಕೆಲಸ ಮಾಡಲು ಆಗುತ್ತಿಲ್ಲ. ಇದರಿಂದ ಸಂಪೂರ್ಣ ಸರ್ಕಾರದ ಆಡಳಿತಕ್ಕೆ ಹೊಡೆತ ಬೀಳುತ್ತಿದೆ. ಮೊದಲಿನಿಂದಲೂ ಯಡಿಯೂರಪ್ಪ ಅವರು ಪಕ್ಷವನ್ನ ಕಟ್ಟಿ ಬೆಳೆಸಿದವರು. ಅದಕ್ಕಾಗಿ ಅವರು ಪಕ್ಷದ ವರಿಷ್ಠರು ಹೇಳಿದಂತೆ ಕೇಳುತ್ತೇನೆ ಎಂದಿದ್ದಾರೆ. ಮಾಧ್ಯಮದಲ್ಲಿ ನೋಡಿ ಬೇಸರಗೊಂಡು ಅವರು ಈ ಹೇಳಿಕೆ ನೀಡಿರಬಹುದು. ಅದರಲ್ಲಿ ವಿಶೇಷ ಅರ್ಥ ಇಲ್ಲ ಎಂದರು.

ಕಳೆದ 5-6 ತಿಂಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ‌. ಎಲ್ಲಿ ಈ ಚರ್ಚೆ ಹುಟ್ಟಿತು, ಏನು ಅಂತ ಗೊತ್ತಾಗುತ್ತಿಲ್ಲ. ಈಗ ನಾಯಕತ್ವ ಬದಲಾವಣೆ ಚರ್ಚೆಯೇ ಇಲ್ಲ. ವರಿಷ್ಠರು ಮತ್ತು ನಮ್ಮ ಹಂತದಲ್ಲೂ ಸಹ ಬದಲಾವಣೆ ಚರ್ಚೆ ನಡೆದಿಲ್ಲ. ಯಾವುದೋ ವ್ಯವಸ್ಥೆಯಲ್ಲಿ ಪರ್ಯಾಯ ನಾಯಕರು ಇರ್ತಾರೆ‌. ಅದನ್ನೇ ಸಿಎಂ ಹೇಳಿರುವಂತದ್ದು. ವಯಸ್ಸು ಅವರ ಕೆಲಸಕ್ಕೆ ಏನೂ ಅಡ್ಡಿ ಬಂದಿಲ್ಲ. ಸಹಿ ಸಂಗ್ರಹ ವಿಚಾರ ಕೂಡಾ ನನ್ನ ಗಮನಕ್ಕೆ ಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ದಿಢೀರ್​ ಅನ್​​ಲಾಕ್ ಇಲ್ಲ:

ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಪ್ರತಿಶತ 5ಕ್ಕಿಂತ ಕಡಿಮೆ ಬರುವವರೆಗೂ ರಾಜ್ಯದಲ್ಲಿ ಅನ್ ಲಾಕ್ ಆಗುವುದಿಲ್ಲ. ಜೂ.14 ನಂತರ ಎಲ್ಲವೂ ಒಮ್ಮೆಲೆ ದಿಢೀರ್ ಅಂತ ಅನ್ ಲಾಕ್ ಮಾಡಲ್ಲ. ಹಂತ ಹಂತವಾಗಿ ರಾಜ್ಯದಲ್ಲಿ ಅನ್​​ಲಾಕ್ ಮಾಡಲಾಗುವುದು ಎಂದರು.

ಓದಿ: ಮನಸ್ಸಿಗೆ ನೋವಾಗಿ ಸಿಎಂ ರಾಜೀನಾಮೆ ವಿಷಯ ಮಾತನಾಡಿದ್ದಾರೆ: ಲಕ್ಷ್ಮಣ ಸವದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.