ETV Bharat / state

ಶಾಸಕ ಎಸ್​​​.ಆರ್ ವಿಶ್ವನಾಥ್ ಹತ್ಯೆ ಸಂಚು ಬಗ್ಗೆ ನನಗೆ ಮಾಹಿತಿ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ - ಯಲಹಂಕ ಶಾಸಕರ ಹತ್ಯೆಗೆ ಸ್ಕೆಚ್​​​

ಧಾರವಾಡದ ಕಾಲೇಜೊಂದರಲ್ಲಿ ಕೋವಿಡ್ ಪ್ರಕರಣ ಪತ್ತೆಯಾದ ಬಳಿಕ ಕಾಲೇಜು ಸುತ್ತಲಿನ ಪ್ರದೇಶವನ್ನ ಕಂಟೈನ್​​​ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಈ ಝೋನ್​​ನ ಕೆಲವೇ ದೂರದಲ್ಲಿ ವಿವಾಹ ಮಹೋತ್ಸವ ಜರುಗುತ್ತಿದೆ. ಇದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದಾರೆ..

CM Basavaraja Bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Dec 1, 2021, 12:11 PM IST

ಹುಬ್ಬಳ್ಳಿ : ಯಲಹಂಕ ಶಾಸಕ ಎಸ್​​​.ಆರ್ ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿರುವ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸ್ವತಃ ವಿಶ್ವನಾಥ್ ಅವರ ಬಳಿಯೇ ಈ ಬಗ್ಗೆ ಮಾತನಾಡುತ್ತೇನೆ. ಅದರ ಆಧಾರದ ಮೇಲೆ ಏನು ಕಾನೂನು ಕ್ರಮಕೈಗೊಳ್ಳಬೇಕು ಎಂಬುದನ್ನು ನೋಡುತ್ತೇವೆ ಎಂದಿದ್ದಾರೆ.

ಶಾಸಕ ಎಸ್​​​.ಆರ್ ವಿಶ್ವನಾಥ್ ಹತ್ಯೆ ಸಂಚಿನ ಕುರಿತು ಬೊಮ್ಮಾಯಿ ಪ್ರತಿಕ್ರಿಯೆ ನೀಡಿರುವುದು..

ಬಳಿಕ ಧಾರವಾಡದ ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಸ್ನೇಹಿತರೊಬ್ಬರ ಕುಟುಂಬಸ್ಥರ ವಿವಾಹ ಸಮಾರಂಭದಲ್ಲಿ ಸಿಎಂ ಭಾಗಿಯಾದರು. ಕೊರೊನಾ ಹೆಚ್ಚುತ್ತಿದ್ದರು ವಿವಾಹ ಸಮಾರಂಭದಲ್ಲಿ ಭಾಗಿಯಾದ ಕುರಿತು ಸ್ಪಷ್ಟನೆ ನೀಡಿದ ಅವರು, ಈ ಮದುವೆ ಹಾಲ್ ಕಂಟೈನ್​​​​​ಮೆಂಟ್​​ ಝೋನ್​​ನಿಂದ ಹೊರಗಿದೆ.

ಮದುವೆಗೆ 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಡಿಸಿ ಸ್ಪಷ್ಟನೆ ಬಳಿಕವಷ್ಟೇ ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮ ಅನಿವಾರ್ಯ, ಲಾಕ್​ಡೌನ್ ಮಾಡುವುದಿಲ್ಲ: ಸಿಎಂ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.