ETV Bharat / state

ಗೊಂದಲಕ್ಕೆ ತೆರೆ : ಧಾರವಾಡ ಜಿಲ್ಲೆಗೂ ಅನ್‌ಲಾಕ್ -2 ಮಾರ್ಗಸೂಚಿ ಅನ್ವಯ - ಅನ್‌ಲಾಕ್-2 ಮಾರ್ಗಸೂಚಿ ಧಾರವಾಡಕ್ಕೆ ಅನ್ವಯ

ಇದೀಗ ಸರ್ಕಾರ ಶೇ.5ಕ್ಕಿಂತ ಪಾಸಿಟಿವಿಟಿ ಪ್ರಮಾಣ ಕಡಿಮೆ ಇರುವ ಧಾರವಾಡ ಜಿಲ್ಲೆಯನ್ನೂ ಕೆಟಗರಿ-1 ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದೆ. ಆ ಮೂಲಕ ನಾಳೆಯಿಂದ ಧಾರವಾಡ ಜಿಲ್ಲೆಗೂ ಅನ್‌ಲಾಕ್-2 ಮಾರ್ಗಸೂಚಿಯನ್ವಯ ಇನ್ನಷ್ಟು ಸಡಿಲಿಕೆ ಅನ್ವಯವಾಗಲಿದೆ..

dharwad
dharwad
author img

By

Published : Jun 20, 2021, 5:49 PM IST

ಬೆಂಗಳೂರು/ಧಾರವಾಡ : ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಧಾರವಾಡ ಜಿಲ್ಲೆಗೂ ಅನ್‌ಲಾಕ್-2 ಮಾರ್ಗಸೂಚಿ ಅನ್ವಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆ ಹೊರಡಿಸಿದ ಅನ್‌ಲಾಕ್-2 ಪರಿಷ್ಕೃತ ಆದೇಶದಲ್ಲಿ ಧಾರವಾಡ ಜಿಲ್ಲೆಯನ್ನು ಕೈಬಿಡಲಾಗಿತ್ತು. ಧಾರವಾಡ ಜಿಲ್ಲೆಯನ್ನು ಶೇ.5ರಷ್ಟು ಪಾಸಿಟಿವಿಟಿ ಮೇಲ್ಪಟ್ಟ ಜಿಲ್ಲೆಯನ್ನಾಗಿ (ಕೆಟಗರಿ-2 ಜಿಲ್ಲೆ) ಪರಿಗಣಿಸಲಾಗಿತ್ತು. ಆದರೆ, ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಸತತ 10 ದಿನಗಳಿಂದ ಶೇ.5ಕ್ಕಿಂತ ಕಡಿಮೆ ದಾಖಲಾಗುತ್ತಿದೆ.

ಹೀಗಿದ್ದರೂ ಗೊಂದಲದ ಹಿನ್ನೆಲೆ ಪಾಸಿಟಿವಿಟಿ ಪ್ರಮಾಣ ಶೇ.5ರಷ್ಟು ಮೇಲ್ಪಟ್ಟ ಜಿಲ್ಲೆಗಳ ಕೆಟಗರಿ-2 ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಈ ಹಿನ್ನೆಲೆ ಧಾರವಾಡ ಜಿಲ್ಲೆಗೆ ಅನ್‌ಲಾಕ್-2 ಸಡಿಲಿಕೆಯಿಂದ ವಂಚಿತವಾಗಿತ್ತು. ಜಿಲ್ಲಾಡಳಿತದಿಂದ ಧಾರವಾಡ ಜಿಲ್ಲೆಯ ಸರಾಸರಿ ಪಡೆದು ಪರಿಶೀಲಿಸಿದಾಗ 4.5% ಕ್ಕಿಂತ ಕಡಿಮೆ ಇರುವುದು ಖಚಿತವಾಗಿದೆ.

ಈ ಹಿನ್ನೆಲೆ ಸಚಿವ ಜಗದೀಶ್ ಶೆಟ್ಟರ್ ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​​ ಅವರಿಗೆ ಮಾಹಿತಿ ನೀಡಿದರು. ಧಾರವಾಡ ಜಿಲ್ಲೆಯನ್ನೂ ಸಹ ಅನ್‌ಲಾಕ್ ಮಾಡುವಂತೆ ಕೋರಿದ್ದರು.

ಇದೀಗ ಸರ್ಕಾರ ಶೇ.5ಕ್ಕಿಂತ ಪಾಸಿಟಿವಿಟಿ ಪ್ರಮಾಣ ಕಡಿಮೆ ಇರುವ ಧಾರವಾಡ ಜಿಲ್ಲೆಯನ್ನೂ ಕೆಟಗರಿ-1 ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದೆ. ಆ ಮೂಲಕ ನಾಳೆಯಿಂದ ಧಾರವಾಡ ಜಿಲ್ಲೆಗೂ ಅನ್‌ಲಾಕ್-2 ಮಾರ್ಗಸೂಚಿಯನ್ವಯ ಇನ್ನಷ್ಟು ಸಡಿಲಿಕೆ ಅನ್ವಯವಾಗಲಿದೆ.

ಇದನ್ನೂ ಓದಿ:ಸಚಿನ್ ತೆಂಡೂಲ್ಕರ್​ಗೆ 21ನೇ ಶತಮಾನದ ಶ್ರೇಷ್ಠ ಟೆಸ್ಟ್​ ಬ್ಯಾಟ್ಸ್​ಮನ್​ ಗೌರವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.