ಹುಬ್ಬಳ್ಳಿ: ನಗರದ ದುರ್ಗದ ಬೈಲ್ನಲ್ಲಿ ಅಕ್ರಮವಾಗಿ ತೆರೆಯಲಾಗಿದ್ದ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ಇದೇ ವೇಳೆ ಗಣೇಶ ಪೇಟೆಯ ಮೀನು ಮಾರುಕಟ್ಟೆ ಸ್ಥಳಾಂತರ ಕಾರ್ಯಾಚರಣೆಯನ್ನು ಮಾಡಲಾಯಿತು.
ದುರ್ಗದ ಬೈಲ್‌ನಿಂದ ಸಿಬಿಟಿಗೆ ಹೋಗುವ ಮಾರ್ಗ ಮಧ್ಯದ 20ಕ್ಕೂ ಹೆಚ್ಚು ಡಬ್ಬಾ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪಾರ್ಕಿಂಗ್ ಜಾಗದಲ್ಲಿ ಅಂಗಡಿಗಳನ್ನು ತೆರೆದಿರುವುದರಿಂದ ವಾಹನ ಸವಾರರು ಪರದಾಡುತ್ತಿದ್ದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಅಂದಾಜು 5.30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸ ಮೀನು ಮಾರುಕಟ್ಟೆ ತೆರೆಯಲಿದ್ದು, ಇದರಲ್ಲಿ 38 ಮಳಿಗೆಗಳು, ಪಾರ್ಕಿಂಗ್ ಅನುಕೂಲವಿದೆ. ಆದ್ದರಿಂದ ಹಳೇ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.