ಧಾರವಾಡ: ನಗರದ ಸೂಪರ್ ಮಾರ್ಕೆಟ್ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸ್ಥಳೀಯ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಪಾಲಿಕೆಯಿಂದ ಕಾರ್ಯಾಚರಣೆಗೆ ಬಂದ ಜೆಸಿಬಿ ಮಷಿನ್ ಮುಂದೆ ಮಲಗುವ ಮೂಲಕ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದರು.
ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯ ವ್ಯಾಪಾರಸ್ಥರು ಪ್ರತಿಭಟನೆಗೆ ಮುಂದಾಗಿದ್ದು, ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಸ್ಥಳಕ್ಕೆ ಎಸಿಪಿ ಅನುಷಾ ಭೇಟಿ ನೀಡಿ ಗಲಾಟೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಈ ವೇಳೆ ಪೊಲೀಸರು ಹಾಗೂ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.
ಮಾಹಿತಿ ನೀಡದೆ ಏಕಾಏಕಿ ಅಂಗಡಿ ತೆರವು ಮಾಡ್ತಿರಾ? ಅಂಗಡಿ ಮಾಲಿಕರು ಎಲ್ಲಿ ಹೋಗಬೇಕು?. ಯಾವುದೇ ಪರಿಹಾರ ನೀಡಿಲ್ಲ. ಕೊರೊನಾ ಮಹಾಮಾರಿಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಈ ಕಾರ್ಯಾಚರಣೆ ಸ್ಥಗಿತಗೊಳಿಸಬೇಕೆಂದು ವ್ಯಾಪಾರಸ್ಥರು ಆಗ್ರಹಿಸಿದರು.