ETV Bharat / state

ಶಾಲೆಯಲ್ಲಿಯೇ ಅದ್ಧೂರಿಯಾಗಿ ಸಂಕ್ರಾಂತಿ ಆಚರಿಸಿದ ವಿದ್ಯಾರ್ಥಿಗಳು

ಧಾರವಾಡದ ಜೆಎಸ್ಎಸ್ ಶ್ರೀ‌ಮಂಜುನಾಥೇಶ್ವರ ಸಿಬಿಎಸ್ಇ ಶಾಲೆ ವಿದ್ಯಾರ್ಥಿಗಳು ಸಂಕ್ರಾಂತಿ ಮುನ್ನಾದಿನ, ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

sankranti festival
ಶಾಲೆಯಲ್ಲಿಯೇ ಅದ್ದೂರಿಯಾಗಿ ಸಂಕ್ರಾಂತಿ ಆಚರಿಸಿದ ವಿದ್ಯಾರ್ಥಿಗಳು
author img

By

Published : Jan 14, 2021, 7:26 AM IST

ಧಾರವಾಡ: ಕೊರೊನಾದಿಂದ ಬಂದ್ ಆಗಿದ್ದ ಶಾಲೆಗಳು ಪುನರ್ ಆರಂಭಗೊಂಡಿವೆ. ಪಠ್ಯ, ವಿದ್ಯಾಭ್ಯಾಸ ಅಂತಾ ಬ್ಯುಸಿಯಾಗಿರುತ್ತಿದ್ದ ವಿದ್ಯಾರ್ಥಿಗಳು ಇಂದು ಸಖತ್ ಎಂಜಾಯ್ ಮಾಡಿದ್ದಾರೆ. ಆಧುನಿಕ ಯುಗದಲ್ಲಿ ನಶಿಸಿ ಹೋಗುತ್ತಿರುವ ಹಬ್ಬ ಹರಿದಿನಗಳನ್ನು ನೆನಪಿಸಿದ್ದಾರೆ.

ಶಾಲೆಯಲ್ಲಿಯೇ ಅದ್ದೂರಿಯಾಗಿ ಸಂಕ್ರಾಂತಿ ಆಚರಿಸಿದ ವಿದ್ಯಾರ್ಥಿಗಳು

ಧಾರವಾಡದ ಜೆಎಸ್ಎಸ್ ಶ್ರೀ‌ಮಂಜುನಾಥೇಶ್ವರ ಸಿಬಿಎಸ್ಇ ಶಾಲೆ ವಿದ್ಯಾರ್ಥಿಗಳು ಸಂಕ್ರಾಂತಿ ಮುನ್ನಾದಿನ ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಒಂದೊಂದು ರಾಜ್ಯದಲ್ಲಿ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಆಯಾ ರಾಜ್ಯದ ವೇಷಭೂಷಣ ತೊಟ್ಟು ಶಾಲೆಗೆ ಆಗಮಿಸಿ ಹಬ್ಬ ಆಚರಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಹಬ್ಬ ಆಚರಣೆ ಮಾಡುವಂತೆ ವಿದ್ಯಾರ್ಥಿಗಳು ಸೂರ್ಯದೇವನನ್ನು ಕೂರಿಸಿ ಪೂಜೆ ಸಲ್ಲಿಸಿದ್ದಾರೆ. ಸಂಕ್ರಾಂತಿ ಹಬ್ಬದಂದು ರೈತಾಪಿ‌ ಜನ ಮೊದಲು ಬೆಳೆಯನ್ನು ರಾಶಿ ಮಾಡಿ ಭೂಮಿ ತಾಯಿಗೆ ಪೂಜೆ ಸಲ್ಲಿಸುತ್ತಾರೆ. ಅದೇ ರೀತಿಯಾಗಿ ಶಾಲಾ ಮಕ್ಕಳು ಸಂಕ್ರಾತಿ ಹಬ್ಬವನು ಆಚರಿಸಿದ್ದು, ವಿಶೇಷವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.