ಗೂಗಲ್ನಲ್ಲಿ ಸರ್ಚ್ ಮಾಡುವ ಮುನ್ನ ಎಚ್ಚರ.. ಕಸ್ಟಮರ್ ಕೇರ್ ಹೆಸರಿನಲ್ಲಿ ಮಹಿಳೆಗೆ ವಂಚನೆ: 2.75 ಲಕ್ಷ ರೂ. ಪಂಗನಾಮ - whatsApp call
ಕಸ್ಟಮರ್ ಕೇರ್‌ನಿಂದ (customer care) ಮಾತನಾಡುತ್ತಿರುವುದಾಗಿ ಹೇಳಿಕೊಂಡ ವ್ಯಕ್ತಿ ಯುವತಿಗೆ ವಾಟ್ಸ್ಆ್ಯಪ್ ಕಾಲ್ (WhatsApp Call) ಮಾಡಿ ಆ್ಯಪ್‌ವೊಂದನ್ನು ಇನ್‌ಸ್ಟಾಲ್ (app install) ಕೂಡಾ ಮಾಡಿಸಿ, ಸುಮಾರು 2.75 ಲಕ್ಷ ರೂ ವಂಚನೆ ಮಾಡಿದ್ದಾರೆ.
cheating to a women in the name of customer care
ಹುಬ್ಬಳ್ಳಿ (hubli) : ಕಸ್ಟಮರ್ ಕೇರ್‌ನಿಂದ ಕರೆ ಮಾಡಿರುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ 2.75 ಲಕ್ಷ ರೂ. (cheating to women) ವಂಚಿಸಿದ ಪ್ರಕರಣ ನಡೆದಿದ್ದು, ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ( cyber crime police station) ಈ ಸಂಬಂಧ ದೂರು ದಾಖಲಾಗಿದೆ.
ಬ್ಯಾಂಕ್‌ವೊಂದರ ಕ್ರೆಡಿಟ್ ಕಾರ್ಡ್‌ನ ಬಿಲ್(credit card bill) 22,900 ರೂ. ರದ್ದುಗೊಳಿಸುವುದಕ್ಕಾಗಿ ಯುವತಿ, ಗೂಗಲ್ನಲ್ಲಿ ಬ್ಯಾಂಕಿನ ಕಸ್ಟಮರ್ ಕೇರ್ (customer care) ನಂಬರ್ ಹುಡುಕಿದ್ದಾರೆ. ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ ಅತ್ತ ಕಡೆಯಿಂದ ಕರೆ ಸ್ವೀಕರಿಸಿದ ವ್ಯಕ್ತಿ ಯುವತಿಯ ಮೊಬೈಲ್‌ಗೆ ಲಿಂಕ್ವೊಂದನ್ನು ಕಳುಹಿಸಿದ್ದಾರೆ. ಆ ಲಿಂಕ್‌ನಲ್ಲಿ ಯುವತಿಯ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರ ಭರ್ತಿ ಮಾಡುವಂತೆ ಸೂಚಿಸಿದ್ದಾನೆ.
ಪ್ರತಿನಿಧಿ ಹೇಳಿದಂತೆ ವಿವರ ತುಂಬಿದ ಯುವತಿ: ಕಸ್ಟಮರ್ ಕೇರ್ನ ಪ್ರತಿನಿಧಿಯ ನಿರ್ದೇಶನದಂತೆ ಯುವತಿ ಎಲ್ಲ ವಿವರಗಳನ್ನು ಲಿಂಕ್‌ನಲ್ಲಿ ಭರ್ತಿ ಮಾಡಿದ್ದಾಳೆ. ಕಸ್ಟಮರ್ ಕೇರ್‌ನಿಂದ (customer care) ಮಾತನಾಡುತ್ತಿರುವುದಾಗಿ ಹೇಳಿಕೊಂಡ ವ್ಯಕ್ತಿ ಯುವತಿಗೆ ವಾಟ್ಸ್ಆ್ಯಪ್ ಕಾಲ್ ಮಾಡಿ (whatsApp call) ಆ್ಯಪ್‌ವೊಂದನ್ನು ಇನ್‌ಸ್ಟಾಲ್ ಕೂಡಾ ಮಾಡಿಸಿದ್ದಾರೆ.
ಈ ಮೂಲಕ ಯುವತಿಯ ಮೊಬೈಲ್‌ಗೆ ಬಂದ ಒಟಿಪಿ ಹಾಗೂ ಇತರ ಸಂದೇಶಗಳನ್ನು ಕಸ್ಟಮರ್ ಕೇರ್ನ ಪ್ರತಿನಿಧಿ ಎಂದು ಹೇಳಿಕೊಂಡಾತ ಈ ಎಲ್ಲ ವಿವರಗಳು ತನ್ನ ಮೊಬೈಲ್‌ಗೆ ಬರುವಂತೆ ಮಾಡಿಕೊಂಡಿದ್ದಾನೆ. ನಂತರ ಕೆಲವೇ ಸಮಯದಲ್ಲಿ ಯುವತಿಯ ಬ್ಯಾಂಕ್ ಖಾತೆಯಿಂದ 1.50 ಲಕ್ಷ ರೂ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಯುವತಿಯ ಕ್ರೆಡಿಟ್ ಕಾರ್ಡ್‌ನಿಂದ 1.25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಆನ್‌ಲೈನ್ ಮೂಲಕ ಆರ್ಡರ್ (Online Order) ಕೂಡಾ ಮಾಡಿದ್ದಾನಂತೆ.