ಧಾರವಾಡ: ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸೈಕಲ್ ವಿತರಣೆಯಾಗಿದೆ. ಗುತ್ತಿಗೆ ಪಡೆದಿರುವ ಕಾಂಟ್ರಾಕ್ಟರ್ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಮಂತ್ರಿಗಳಿಗೆ ಹೇಳುತ್ತೇವೆ ಎಂದು ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಗುಣಮಟ್ಟದ ಸೈಕಲ್ ರಾಜ್ಯಾದ್ಯಂತ ವಿತರಣೆ ಆಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ಸೈಕಲ್ ವಿತರಣೆ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡುವೆ ಎಂದರು.
ಈ ಹಿಂದೆ ಕಲಘಟಗಿ ಕ್ಷೇತ್ರದ ವೀರಾಪೂರ ಗ್ರಾಮದ ಸರ್ಕಾರಿ ಶಾಲೆಗೆ ವಿತರಿಸಲಾಗಿದ್ದ ಕಳಪೆ ಗುಣಮಟ್ಟದ ಸೈಕಲ್ ಕುರಿತು, 'ಸರಿಯಾಗಿ ಉರುಳುತ್ತಿಲ್ಲ ಸರ್ಕಾರದ ಸೈಕಲ್, ಕೇಳೊರಿಲ್ಲ ವಿದ್ಯಾರ್ಥಿಗಳ ಗೋಳು' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವಿಶೇಷ ವರದಿ ಪ್ರಕಟಿಸಿತ್ತು.