ETV Bharat / state

ಸಿಎಂ ನೀಡಿದ ಕೆಲ ಯೋಜನೆಗಳಿಗೆ ವೇದಿಕೆಯಲ್ಲೇ ಮಂಜೂರಾತಿ ನೀಡಿದ ನಿತಿನ್ ಗಡ್ಕರಿ - ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ

ಸಿಎಂ ನೀಡಿದ ಕೆಲ ಯೋಜನೆಗಳಿಗೆ ವೇದಿಕೆಯಲ್ಲೇ ಮಂಜೂರು ಮಾಡೋದಾಗಿ ಘೋಷಣೆ ಮಾಡಿದ ಅವರು, ಈ ವೇಳೆ ಇಲ್ಲಿ ಬಂದು ನೀವು ಇವರ ಕೆಲಸ ಮಾಡುತ್ತಿರಿ, ನಮ್ಮದು ಮಾಡಿ ಎಂದ ಖರ್ಗೆಯವರಿಗೆ ನೀವು ಕೂಡಾ ಮನವಿ ಸಲ್ಲಿಸಿ, ನಾನೇ ಖುದ್ದು ಮಂಜೂರಿ ನೀಡುತ್ತೇನೆ ಎಂದು ನಿತಿನ್ ಗಡ್ಕರಿ ಭರವಸೆ ನೀಡಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ
ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ
author img

By

Published : Feb 28, 2022, 8:39 PM IST

ಹುಬ್ಬಳ್ಳಿ : ಕೇಂದ್ರ ಸರ್ಕಾರದ ವತಿಯಿಂದ ಇಂದು 13 ಸಾವಿರ ಕೋಟಿ ವೆಚ್ಚದ ಕಾಮಗಾರಿಯನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ನಗರದಲ್ಲಿಂದು ರಸ್ತೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಬ್ಬೂರ ಬೈಪಾಸ್ ನಿಂದ ಧಾರವಾಡ ನರೇಂದ್ರದವರೆಗಿನ ರಸ್ತೆ ನಿರ್ಮಾಣದಲ್ಲಿ ಈ ರಸ್ತೆ ವಿಸ್ತರಣೆಗೆ ಬಹಳ ತಾಂತ್ರಿಕ ತೊಂದರೆಯಿತ್ತು. ಆದರೆ ಪ್ರಹ್ಲಾದ್ ಜೋಶಿಯವರ ಒತ್ತಾಯಕ್ಕೆ ಮಣಿದು ಮಂಜೂರು ಮಾಡಿದ್ದೇವೆ. ಹುಬ್ಬಳ್ಳಿಯ ಫ್ಲೈ ಓವರ್ ಕಾಮಗಾರಿ ಶ್ರೇಯಸ್ಸು ಕೂಡ ಜೋಶಿಗೆ ಸಲ್ಲಬೇಕು ಎಂದು ಅವರು ಇದೇ ವೇಳೆ ಹೇಳಿದರು.

ಸಿಎಂ ನೀಡಿದ ಕೆಲ ಯೋಜನೆಗಳಿಗೆ ವೇದಿಕೆಯಲ್ಲೇ ಮಂಜೂರಾತಿ ನೀಡಿದ ನಿತಿನ್ ಗಡ್ಕರಿ

ಅಲ್ಲದೇ ಸಿಎಂ ನೀಡಿದ ಕೆಲ ಯೋಜನೆಗಳಿಗೆ ವೇದಿಕೆಯಲ್ಲೇ ಮಂಜೂರು ಮಾಡೋದಾಗಿ ಘೋಷಣೆ ಮಾಡಿದ ಅವರು, ಈ ವೇಳೆ ಇಲ್ಲಿ ಬಂದು ನೀವು ಇವರ ಕೆಲಸ ಮಾಡುತ್ತಿರಿ, ನಮ್ಮದು ಮಾಡಿ ಎಂದ ಖರ್ಗೆಯವರಿಗೆ ನೀವು ಕೂಡಾ ಮನವಿ ಸಲ್ಲಿಸಿ, ನಾನೇ ಖುದ್ದು ಮಂಜೂರಿ ನೀಡುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಸಚಿವ ಗಡ್ಕರಿ ಹಾಡಿ ಹೊಗಳಿದ ಖರ್ಗೆ.. ಸಾವಿನ ದಾರಿಗೆ ಮುಕ್ತಿ: ಟೋಲ್ ಫ್ರೀ ಮೂಲಕ ವಿಶೇಷ ಸೇವೆ.. ಸಚಿವ ಜೋಶಿ ವಿಶ್ವಾಸ

ನಮ್ಮ ಕಾಲದಲ್ಲಿ ಭಾರತದ ರಸ್ತೆಗಳನ್ನು ಅಮೆರಿಕ ರಸ್ತೆಗಳ ರೀತಿಯಲ್ಲಿ ಮಾಡುತ್ತೇವೆ. ನಮ್ಮಲ್ಲಿ ಹಣಕಾಸಿನ ತೊಂದರೆಯಿಲ್ಲ. ಖರ್ಗೆಯವರಿಗೂ ನಾನು ವಚನ ನೀಡುತ್ತೇನೆ. ಅವರ ಕ್ಷೇತ್ರಕ್ಕೂ 5 ಸಾವಿರ ಕೋಟಿ ವೆಚ್ಚದ ಕಾಮಗಾರಿ ನೀಡುತ್ತೇನೆ. ನಾನೇ ಖುದ್ದು ಕಲಬುರಗಿಗೆ ಬಂದು ಶಿಲನ್ಯಾಸ ಮಾಡುತ್ತೇನೆ ಎಂದು ಅವರು ಇದೇ ವೇಳೆ ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.