ETV Bharat / state

ಯೋಗೀಶಗೌಡ ಕೊಲೆ ಪ್ರಕರಣ ಸಿಬಿಐಗೆ: ಬಿಎಸ್‌ವೈಗೆ ಕುಟುಂಬಸ್ಥರ ಧನ್ಯವಾದ - Dharwad district news

ಯೋಗೀಶಗೌಡ ಸಹೋದರ ಗುರುನಾಥ ಗೌಡ, ತಾಯಿ ತುಂಗಮ್ಮ ಹಾಗೂ ಅವರ ಆಪ್ತರು ಧಾರವಾಡ ತಾಲೂಕಿನ ಗೋವನಕೊಪ್ಪದ ಮನೆಯಲ್ಲಿ ಸಂಭ್ರಮಪಟ್ಟಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಕುಟುಂಬಸ್ಥರೆಲ್ಲರೂ ಧನ್ಯವಾದ ಅರ್ಪಿಸಿದ್ದಾರೆ.

ಯೋಗೀಶಗೌಡ ಕುಟುಂಬ
author img

By

Published : Sep 7, 2019, 9:28 AM IST

ಧಾರವಾಡ : ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಮೃತ ಯೋಗೇಶಗೌಡ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ. ಸರ್ಕಾರ ಆದೇಶ ಹೊರಡಿಸಿದ ನಂತರ ಕುಟುಂಬಸ್ಥರು ಪರಸ್ಪರ ಸಿಹಿ ತಿನ್ನಿಸಿ ಸಂತೋಷ ಪಟ್ಟರು.

ಸಿಎಂ ಗೆ ಧನ್ಯವಾದ ಅರ್ಪಿಸಿದ ಕುಟುಂಬಸ್ಥರು
ತಾಯಿ ತುಂಗಮ್ಮ ಅವರಿಗೆ ಸಿಹಿ ತಿನ್ನಿಸಿ ನಂತರ ಮಾತನಾಡಿದ ಯೋಗೇಶಗೌಡ ಸಹೋದರ ಗುರುನಾಥಗೌಡ, ಬಿಜೆಪಿ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಯೋಗೇಶಗೌಡ ಆಪ್ತ ಬಸವರಾಜ ಕೊರವರ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಸಿಬಿಐಗೆ ನೀಡುತ್ತೇವೆ ಎಂದು ಮಾತು ಕೊಟ್ಟಿದ್ದರು. ಆದರೆ ಸ್ವಲ್ಪ ತಡವಾಗಿಯಾದ್ರೂ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ನಮಗೆಲ್ಲ ಸಂತೋಷ ತಂದಿದೆ. ಧಾರವಾಡ ಜಿಲ್ಲೆಯ ಹಲವು ಪ್ರಭಾವಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ತಕ್ಕ ಶಿಕ್ಷೆ ಆಗುತ್ತೆ ಎಂದು ನಂಬಿದ್ದೇವೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ರು.

Intro:ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣ ಸಿಬಿಐಗೆ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದ ಹಿನ್ನೆಲೆ ಮೃತ ಯೋಗೇಶಗೌಡ ಕುಟುಂಬಸ್ಥರಲ್ಲಿ, ಸಂತಷ ಮನೆ ಮಾಡಿದೆ. ಸರ್ಕಾರ ಆದೇಶ ಹೊರಡಿಸಿದ ನಂತರ ಕುಟುಂಬಸ್ಥರು ಪರಸ್ಪರ ಸಿಹಿ ತಿನ್ನಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಯೋಗೇಶಗೌಡ ಸಹೋದರ ಗುರುನಾಥಗೌಡ ತಾಯಿ ತುಂಗಮ್ಮ ಹಾಗೂ ಅವರ ಆಪ್ತರು ಧಾರವಾಡ ತಾಲೂಕಿನ ಗೋವನಕೊಪ್ಪದ ಮನೆಯಲ್ಲಿ ಸಂಭ್ರಮ ಪಟ್ಟಿದ್ದಾರೆ. ಸರ್ಕಾರದ ಈ ನಿರ್ದಾರಕ್ಕೆ ಕುಟುಂಬಸ್ಥರೆಲ್ಲರೂ ದನ್ಯವಾದಗಳನ್ನು ಅರ್ಪಿಸಿದ್ದಾರೆ.

ತಾಯಿ ತುಂಗಮ್ಮ ಅವರಿಗೆ ಸಿಹಿ ತಿನ್ನಿಸಿ ನಂತರ ಮಾತನಾಡಿದ ಯೋಗೇಶಗೌಡ ಸಹೋದರ ಗುರುನಾಥಗೌಡ ಬಿಜೆಪಿ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದನ್ಯವಾದವನ್ನು ತಿಳಿಸಿದ್ದಾರೆ. ಅದೇ ರೀತಿ ಯೋಗೇಶಗೌಡ ಆಪ್ತ ಬಸವರಾಜ ಕೊರವರ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಸಿಬಿಐಗೆ ನೀಡುತ್ತೇವೆ ಎಂದು ಮಾತು ಕೊಟ್ಟಿದ್ದರು ಆದ್ರೆ ಸ್ವಲ್ಪ ತಡವಾಗಿಯಾದ್ರು ಯಡಿಯೂರಪ್ಪನವರ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ನಮಗೆಲ್ಲ ಸಂತೋಷ ತಂದಿದೆ.Body:ಧಾರವಾಡ ಜಿಲ್ಲೆಯ ಹಲವು ಪ್ರಭಾವಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ತಕ್ಕ ಶಿಕ್ಷೆ ಆಗುತ್ತೆ ಎಂದು ನಂಬಿಕೆ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಬೈಟ್: ಗುರುನಾಥಗೌಡ ಗೌಡರ್ (ಯೋಗೇಶಗೌಡ ಸಹೋದರ ಬಿಳಿ‌ ಶರ್ಟ್ ಧರಿಸಿದವರು)

ಬೈಟ್: ಬಸವರಾಜ ಕೊರವರ್ (ಯೋಗೇಶಗೌಡ ಆಪ್ತ ಚೆಕ್ಸ್ ಶರ್ಟ್ ಹಾಕಿಕೊಂಡವರು)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.