ETV Bharat / state

'ಯೊಗೀಶ್​​ಗೌಡ' ಕೊಲೆಗೂ 'ಪೊಲೀಸ್ ಪೇದೆ'ಗೂ ಏನು​​ ಸಂಬಂಧ?: ಸಿಬಿಐನಿಂದ ಚುರುಕುಗೊಂಡ ತನಿಖೆ

author img

By

Published : May 8, 2020, 2:55 PM IST

ಕೊಲೆಯಾದ ದಿನವೂ ಆರೋಪಿಗಳ ಜೊತೆ ಬಾಬು ಕಟಗಿ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು,ಕೊಲೆ ನಡೆದ ದಿನ ಪೇದೆ ರಜೆಯಲ್ಲಿದ್ದರೂ ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಬಗ್ಗೆ ಸಿಬಿಐಗೆ ಸಾಕ್ಷ್ಯಗಳು ದೊರೆತಿವೆ.

CBI Investige about murder case of Yogesh Gowda
'ಯೊಗೀಶ್​​ಗೌಡ' ಕೊಲೆ ಪ್ರಕರಣ

ಹುಬ್ಬಳ್ಳಿ: ಧಾರವಾಡ ಜಿ.ಪಂ‌ ಸದಸ್ಯ ಯೊಗೀಶ್​​ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದ್ದು,ಬೆಂಡಿಗೇರಿ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರನ್ನು ವಿಚಾರಣೆಗೆ ಒಳಪಡಿಸಿದೆ.

ಬೆಂಡಿಗೇರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಬಾಬು ಕಟಗಿಯನ್ನು ಸಿಬಿಐ ತೀವ್ರ ವಿಚಾರಣೆ ನಡೆಸಿದ್ದು,ಕೊಲೆಯಲ್ಲಿ ಪೇದೆಯ ಪಾತ್ರದ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ಅಲ್ಲದೇ ಈ ಪೇದೆ ಕೊಲೆ ಆರೋಪಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯನ್ನ ಸಿಬಿಐ ಮೂಲಗಳು ತಿಳಿಸಿವೆ.

ಕೊಲೆಯಾದ ದಿನವೂ ಆರೋಪಿಗಳ ಜೊತೆ ಬಾಬು ಕಟಗಿ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಕೊಲೆ ನಡೆದ ದಿನ ಪೇದೆ ರಜೆಯಲ್ಲಿದ್ದರೂ ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಬಗ್ಗೆ ಸಿಬಿಐಗೆ ಸಾಕ್ಷ್ಯಗಳು ದೊರೆತಿವೆ. ಈ ಹಿನ್ನೆಲೆ ಸಿಬಿಐ ತೀವ್ರ ವಿಚಾರಣೆಗೆ‌ ಒಳಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.