ಧಾರವಾಡ: ಕೊರೊನಾ ನಿಯಮ ಉಲ್ಲಂಘಿಸಿ ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಮಣ್ಣ ಬಸವೇಶ್ವರ ಜಾತ್ರೆ ಆಚರಿಸಿದ ಆರೋಪದ ಮೇರೆಗೆ 11 ಜನರ ಮೇಲೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ಗ್ರಾಮದ ಆನಂದ ಕಮ್ಮಾರ, ದ್ಯಾಮಣ್ಣ ಉಪ್ಪಾರ, ರಮೇಶ ರೊಟ್ಟಿ, ಶೇಖಪ್ಪ ಚ.ಹುಲಮನಿ, ಕಲ್ಲಪ್ಪ ಮಿರ್ಜಿ, ನಿಂಗಪ್ಪ ಜಾಲಿಹಾಳ, ಸಂಗಪ್ಪ ಕುಂಕೂರು, ಚನ್ನಪ್ಪ ಅರಿಶೀಣಗೇರಿ, ಗುರುಶಿದ್ದಪ್ಪ ಗಾಣಿಗೇರ, ಅಶೋಕ ಮಡ್ಲಿ, ಶಂಕರ ಮಡ್ಲಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏ.3 ರಿಂದ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಚರಿಸಬಾರದು ಎಂದು ಜಿಲ್ಲಾಧಿಕಾರಿಗಳು ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು. ಏ. 13 ರಂದು ಈ ನಿಯಮ ಉಲ್ಲಂಘಿಸಿ, ಮಾಸ್ಕ್ ಧರಿಸದೇ ಮತ್ತು ಸಾಮಾಜಿಕ ಅಂತರ ಕಾಪಾಡದೇ ಮಣ್ಣ ಬಸವೇಶ್ವರ ಜಾತ್ರೆ ಆಚರಿಸಲಾಗಿದೆ ಎಂದು ಜಿನ್ನೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ ಜಮ್ಮಿಹಾಳ ಪ್ರಕರಣ ಕುರಿತು ದೂರು ದಾಖಲಿಸಿದ್ದಾರೆ. ಕಲಘಟಗಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.