ETV Bharat / entertainment

ರಾಕಿಂಗ್​ ಸ್ಟಾರ್​ ಯಶ್​ ರಾಧಿಕಾ ಪುತ್ರನ ಗ್ರ್ಯಾಂಡ್​​ ಬರ್ತ್​ಡೇ ಸೆಲೆಬ್ರೇಶನ್​: ವಿಡಿಯೋ ನೋಡಿ - ROCKING STAR YASH RADHIKA

ಇತ್ತೀಚೆಗಷ್ಟೇ ಯಶ್​ ರಾಧಿಕಾ ಪುತ್ರನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಇದೀಗ ನಟಿ​​ ಬರ್ತ್​ಡೇ ಸೆಲೆಬ್ರೇಶನ್​ನ​ ವಿಡಿಯೋ ಶೇರ್ ಮಾಡಿದ್ದಾರೆ.

Rocking Star Yash and Radhika
ರಾಕಿಂಗ್​ ಸ್ಟಾರ್​ ಯಶ್​ ರಾಧಿಕಾ ದಂಪತಿ (Photo: ETV Bharat)
author img

By ETV Bharat Entertainment Team

Published : Nov 11, 2024, 3:46 PM IST

ಸ್ಯಾಂಡಲ್​ವುಡ್​ನ ಎವರ್​​​ಗ್ರೀನ್​ ಬ್ಯೂಟಿ ರಾಧಿಕಾ ಪಂಡಿತ್​​ ಹಾಗೂ ರಾಕಿಂಗ್​ ಸ್ಟಾರ್​​ ಯಶ್​​ ದಂಪತಿಯ ಕಿರಿ ಪುತ್ರ ಯಥರ್ವ್​​ ಅಕ್ಟೋಬರ್​​ 30ರಂದು ತನ್ನ ಐದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಮಗನ ಹುಟ್ಟುಹಬ್ಬವನ್ನು ಸ್ಯಾಂಡಲ್​ವುಡ್​​ ಪವರ್ ಕಪಲ್​​​ ಬಹಳ ಅದ್ಧೂರಿಯಾಗಿ ಆಚರಿಸಿತ್ತು. ಸಮಾರಂಭಕ್ಕೆ ಕುಟುಂಬಸ್ಥರು, ಆತ್ಮೀಯರು ಸಾಕ್ಷಿಯಾಗಿದ್ದರು.

ಜನ್ಮದಿನಾಚರಣೆಯ ಕೆಲ ವಿಡಿಯೋ ತುಣುಕುಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ ಸಖತ್​ ಸದ್ದು ಮಾಡಿತ್ತು. ಇದೀಗ, ಸ್ವತಃ ನಟಿ ರಾಧಿಕಾ ಪಂಡಿತ್​​ ಅವರೇ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಗ್ರ್ಯಾಂಡ್​​ ಬರ್ತ್​ಡೇ ಸೆಲೆಬ್ರೇಶನ್​ನ ಕಂಪ್ಲೀಟ್​ ವಿಡಿಯೋ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಒಂದು ಸಮಯ ನಂಬರ್​ ಒನ್​ ನಟಿಯಾಗಿ ಮಿಂಚಿದ್ದ ರಾಧಿಕಾ ಪಂಡಿತ್ ಮದುವೆ, ಮಕ್ಕಳ ಬಳಿಕ ಸಿನಿರಂಗದಿಂದ ದೂರವುಳಿದಿದ್ದಾರೆ. ಅವರ ಯಾವುದೇ ಸಿನಿಮಾ ಘೋಷಣೆಯಾಗಿಲ್ಲ. ಆರೇಳು ವರ್ಷಗಳಿಂದ ಅವರ ಯಾವುದೇ ಚಿತ್ರಗಳು ಬಿಡುಗಡೆ ಆಗಿಲ್ಲ. ಆದ್ರೆ ಅವರ ಸ್ಟಾರ್​ಡಮ್​ ಮಾತ್ರ ಕಿಂಚಿತ್ತೂ ಕಡಿಮೆ ಆಗಿಲ್ಲ. ಸಿನಿಮಾಗಳಿಂದ ದೂರವುಳಿದಿದ್ದರೂ ಕೂಡಾ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ್ಗೆ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಅದರಂತೆ, ಅಕ್ಟೋಬರ್​​ 30ರಂದು ಮುದ್ದು ಮಗ ಯಥರ್ವ್​​ ಜನ್ಮದಿನ ಹಿನ್ನೆಲೆ ಕುಟುಂಬದ ಸುಂದರ ಕ್ಷಣಗಳನ್ನೊಳಗೊಂಡ ವಿಡಿಯೋ ಹಂಚಿಕೊಂಡಿದ್ದರು.

ವಿಡಿಯೋ ಹಂಚಿಕೊಂಡಿದ್ದ ನಟಿ, ''ದಿ ಮೋಸ್ಟ್​ ಅಮೇಜಿಂಗ್​​ ಬಾಯ್​ ಆಗಿ ಬೆಳೆಯುವುದನ್ನು ನೋಡುತ್ತಿರುವುದಕ್ಕೆ 5 ವರ್ಷಗಳು. ನಮ್ಮ ಪುಟ್ಟ ಸನ್​ಶೈನ್​ಗೆ 5ನೇ ಜನ್ಮದಿನದ ಶುಭಾಶಯಗಳು'' ಎಂದು ಬರೆದುಕೊಂಡಿದ್ದರು. ನಂತರ ಬರ್ತ್​ಡೇ ಈವೆಂಟ್​ನಲ್ಲಿ ಯಶ್​​ ಮತ್ತು ಮಗಳು ಐರಾ ಅವರ ಡ್ಯಾನ್​​ ಕ್ಷಣಗಳನ್ನು ಶೇರ್​ ಮಾಡಿದ್ದರು. ಇದೀಗ ಬರ್ತ್​​ಡೇ ಸೆಲೆಬ್ರೇಶನ್​​​ ಗ್ಲಿಂಪ್ಸ್​​ ಒದಗಿಸಿದ್ದಾರೆ. ವಿಡಿಯೋ ಬಹಳ ಸುಂದರವಾಗಿದ್ದು, ಅಭಿಮಾನಿಗಳು ಪ್ರೀತಿಯ ಧಾರೆ ಎರೆಯುತ್ತಿದ್ದಾರೆ.

ಇದನ್ನೂ ಓದಿ: Watch: ಮುಂಬೈನಲ್ಲಿ ಯಶ್​​ - ಕಿಯಾರಾ ಅಡ್ವಾಣಿ; 'ಟಾಕ್ಸಿಕ್'​​​ಗೆ ಬಾಲಿವುಡ್​ ನಟಿ?

ಬರ್ತ್​​ಡೇ ನಡೆದು ಒಂದೆರಡು ದಿನಗಳಲ್ಲಿ ವೈರಲ್​ ಆದ ವಿಡಿಯೋದಲ್ಲಿ ರಾಕಿಂಗ್​ ಸ್ಟಾರ್​ನ ರಾಕಿಂಗ್​ ಡ್ಯಾನ್ಸ್​ ಲಭ್ಯವಾಗಿತ್ತು. ಹ್ಯಾಟ್ರಿಕ್​​ ಹೀರೋ ಟಗರು ಹಾಡಿಗೆ ಜಬರ್​ದಸ್ತ್​​ ಆಗಿ ಕುಣಿದಿದ್ದರು. ಆ್ಯಕ್ಷನ್​ ಸ್ಟಾರ್​​ನ ಕ್ಯೂಟ್​ ವಿಡಿಯೋಗಳಿಗೆ ಅಭಿಮಾನಗಳಿಂದ ಸಾಕಷ್ಟು ಪ್ರೀತಿ ವ್ಯಕ್ತವಾಗಿತ್ತು. ಇದೀಗ ಶೇರ್​ ಆಗಿರುವ ಬರ್ತ್​​ಡೇ ವಿಡಿಯೋ ಕೂಡಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಯಶ್ 'ಟಾಕ್ಸಿಕ್​​​'ಗಾಗಿ ಭಾರತಕ್ಕೆ ಬಂದ ಹಾಲಿವುಡ್ ಸ್ಟಂಟ್ ಮ್ಯಾನ್​​: ರಾಕಿಂಗ್​ ಸ್ಟಾರ್​​ ಹಾಡಿ ಹೊಗಳಿದ ಜೆ.ಜೆ ಪೆರಿ

ಇನ್ನೂ ರಾಕಿಂಗ್​ ಸ್ಟಾರ್​ನ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್'​​​. ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ, ಸೌತ್​ ಲೇಡಿ ಸೂಪರ್​ ಸ್ಟಾರ್ ನಯನತಾರಾ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಇದೆ. ಇದೀಗ ಯಶ್​ ಜೊತೆಗೆ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದು, ಊಹಾಪೋಹಗಳು ನಿಜವಾಗುವ ಸಾಧ್ಯತೆಗಳಿವೆ. ಯಶ್ ಮತ್ತು ಕಿಯಾರಾ ಕಳೆದ ದಿನ ಮುಂಬೈನ ವರ್ಸೋವಾದಲ್ಲಿ ಕ್ಯಾಶುಯಲ್ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ವಿಡಿಯೋಗಳು ವೈರಲ್​ ಆಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.